×
Ad

ಯಾದಗಿರಿ | ಸರಕಾರಿ ಭೂಮಿ ಒತ್ತುವರಿ ತಡೆಯುವಂತೆ ದಲಿತ ಸೇನೆಯಿಂದ ಪ್ರತಿಭಟನೆ

Update: 2025-01-17 19:44 IST

ಯಾದಗಿರಿ/ ಸುರಪುರ : ತಾಲೂಕಿನ ಬೋನಾಳ ಮತ್ತು ಹುಣಸಿಹೊಳೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಇದನ್ನು ತಡೆಯುವಂತೆ ಆಗ್ರಹಿಸಿ ದಲಿತ ಶನಿ ಜಿಲ್ಲಾ ಹಾಗೂ ತಾಲೂಕ ಘಟಕದಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ತಾಲೂಕಿನ ಬೋನ್ಹಾಳ ಗ್ರಾಮದಲ್ಲಿಯ ಸರ್ವೆ ನಂಬರ್ 79 ಭೂಮಿಯನ್ನು ಆಂಧ್ರ ಮೂಲದ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ ಹಾಗೂ ಕಕ್ಕೇರಾ ಹೋಬಳಿಯ ಹುಣಸಿಹೊಳೆ ಗ್ರಾಮದ ಸರಕಾರಿ ಜಮೀನು ಸರ್ವೇ ನಂಬರ್ 16 ರಲ್ಲಿಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಇದರಿಂದ ಗ್ರಾಮಗಳಲ್ಲಿನ ಜಾನುವಾರುಗಳನ್ನು ಮೇಯಿಸಲು ಜಾಗವಿಲ್ಲದಂತಾಗಿದೆ ಆದ್ದರಿಂದ ಈ ಅಕ್ರಮಕ್ಕೆ ಕಾರಣವಾಗಿರುವ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಕ್ಕಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಒತ್ತುವರಿಯಾಗಿರುವ ಭೂಮಿಯನ್ನು ಮರಳಿ ಸರಕಾರದ ವಶಕ್ಕೆ ಪಡೆದು ಜಾನುವಾರುಗಳಿಗೆ ಮೇಯಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಇನ್ನಷ್ಟು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ತಹಶೀಲ್ದಾರರಿಗೆ ಬರೆದ ಮನವಿ ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಹೊಸಮನಿ, ಜಿಲ್ಲಾ ಪ್ರ.ಕಾರ್ಯದರ್ಶಿ ಮರಿಲಿಂಗ ಗುಡಿಮನಿ, ತಾಲೂಕು ಅಧ್ಯಕ್ಷ ಮಹಾದೇವ ಚಲವಾದಿ, ಮಹಾದೇವ ದೊಡ್ಮನಿ, ಬಸ್ಸು ಚಟ್ರಕಿ, ಮರೆಪ್ಪ ನಾಟೇಕಾರ್, ರಂಗನಾಥ ಗುಂಡಗುರ್ತಿ, ಅಂಬ್ರೇಶ ಬೂದನೂರ,ಅಯ್ಯಪ್ಪ ಶಹಾಪುರ, ಪರಶುರಾಮ ಕಟ್ಟಿಮನಿ, ಲೊಕೇಶ ವಸ್ತಾರಿ, ಶರಣಬಸವ ಎಮ್, ಸಲೀಂ ಚೌದ್ರಿ, ತಿರುಪತಿ, ಭೀಮರಾಯ ಎಮ್, ಯಲ್ಲಪ್ಪ ಚಿಕ್ಕನಳ್ಳಿ, ಬಸವರಾಜ ದೇವಾಪುರ, ಯಾಸಿರ್ ಖುರೇಶಿ, ಬಾಳಪ್ಪ ದೇವಾಪುರ, ಹುಸನಪ್ಪ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News