×
Ad

ಯಾದಗಿರಿ | ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಜಾಗೃತ ಶಿಬಿರ

Update: 2025-01-30 16:39 IST

ಯಾದಗಿರಿ : ಮಾಜಿ ದೇವದಾಸಿ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಕೊಂಡು ಮಾಹಿತಿಯ ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಬಿರದಾರ ಸಲಹೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಜ.30ರ ಗುರುವಾರ ರಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ, ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಹಾಗೂ ಜಾಗೃತ ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾದಿಂದ ಸಿಗುವ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು. ರಕ್ತ ಹೀನತೆ ಆಗದಂತೆ ನೊಡಿಕೊಳ್ಳಬೇಕು, ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು, ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕ. ಇದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಹತ್ತು ಹಲವು ರೋಗಗಳು ತಗಲುವ ಸಾಧ್ಯತೆಗಳಿವೆ. ಆದ್ದರಿಂದ ದೇವದಾಸಿಯರು ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುವಂತೆ ತಿಳಿಸಿದರು.

ದೇವದಾಸಿ ಪುನರ್ವಸತಿ ಯೋಜನೆ (ಪ್ರ) ಯೋಜನಾ ಅಧಿಕಾರಿಗಳಾದ ಶ್ರೀಮತಿ ಶಿವಮಂಗಳ ಅವರು ಪ್ರಸ್ತಾವಿಕವಾಗಿ ಮಾತನಾಡಿ, ದೇವದಾಸಿ ಪದ್ಧತಿಯ ಅನಿಷ್ಟ ಪದ್ಧತಿಯಿಂದ ಹೊರಬರಲು ಮತ್ತು ಮಾಜಿ ದೇವದಾಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಆರೋಗ್ಯ ಶಿಬಿರಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಈ ಪದ್ಧತಿಯನ್ನು ತೊಡೆದುಹಾಕಲು ಜಿಲ್ಲೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಡಿಟಿಓ ಸಂಜೀವ್ ಕುಮಾರ ರಾಯಚೂರಕರ್, ಡಿಎಮ್ಓ ಡಾ.ಸಾಜಿದ್, ಡಿಎಲ್ಓ ಡಾ.ಪದ್ಮಾನಂದ ಎ. ಗಾಯಕವಾಡ, ಎಫ್ಡಬ್ಲ್ಯೂಓ ಡಾ.ಜೋತಿ ಕಟ್ಟಿಮನಿ, ನಿವೃತ, ಡಿಟಿಓ ಡಾ.ಭಗವಂತ್ ಅನ್ವಾರ್, ಟಿಹೆಚ್ಓ ಡಾ.ಹಣಮಂತರೆಡ್ಡಿ, ಡಿಹೆಚ್ಇಓ ತುಳಸಿರಾಮ ಚವ್ಹಾಣ, ಡಿ.ಎನ್.ಓ ರತ್ನಮ್ಮ, ಸಹನಾ, ಡಾ.ಸುನಿತಾ, ಡಾ.ವಿನುತಾ, ಶ್ರೀ ಶಾಂತಿಲಾಲ್, ಶ್ರೀ ಬಾಗಪ್ಪ, ಶರಣಯ್ಯ ಸ್ವಾಮಿ, ಶ್ರೀ ನಾಗರಾಜ, ಬಸ್ಸಯ್ಯ ಗುತ್ತೆದಾರ, ಶೀಬಾರಾಣಿ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಭಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಾಳಪ್ಪ ಯಾದವ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News