ಯಾದಗಿರಿ | ಸಮಾಜ ಸುಧಾರಣೆಯಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ : ಶರಣು ಬಿ.ಗದ್ದುಗೆ
ಸುರಪುರ : ಬಹುಕಾಲದ ಜನಪದ ಕಲೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಾಟಕ ಕಲೆಯೂ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ.ಗದ್ದುಗೆ ತಿಳಿಸಿದರು.
ತಾಲೂಕಿನ ಲಕ್ಷ್ಮೀಪುರ-ಬಿಜಾಸಪುರ ಮಾರ್ಗ ಮಧ್ಯದ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದ ಆವರಣದಲ್ಲಿ ಜಾತ್ರೆ ಅಂಗವಾಗಿ ಶ್ರೀ ಮರಡಿ ಮಲ್ಲಿಕಾರ್ಜುನ ಸಾಂಸ್ಕೃತಿಕ ಕಲಾ ನಾಟ್ಯ ಸಂಘ ಬಿಜಾಸಪುರ ವತಿಯಿಂದ ಹಮ್ಮಿಕೊಂಡಿದ್ದ ʼಮಸಣ ಸೇರಿದ ಮಲ್ಲಿಗೆ ಹೂ ನಾಟಕ ಪ್ರದರ್ಶನʼ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಸಿನೆಮಾ, ಟಿ.ವಿ ಕಾರ್ಯಕ್ರಮಗಳು ಎಷ್ಟೇ ಮನೋರಂಜನೆ ನೀಡಿದರೂ, ಅನೇಕ ವರ್ಷಗಳಿಂದ ನಾಟಕಗಳು ಸಮಾಜದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂತಹ ನಾಟಕ ಪ್ರದರ್ಶನಕ್ಕೆ ಅಧ್ಯಕ್ಷ ನಿಂಗಪ್ಪ ಬಿಜಾಸಪುರ, ರವಿ ನಾಯಕ ಬೈರಿಮರಡಿ ಆದ್ಯತೆ ನೀಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿರುಪಾಕ್ಷಿ ಕರ್ನಾಳ, ಬಲಭೀಮ ನಾಯಕ ಬೈರಿಮರಡಿ, ದೇವರಾಜ ಮಕಾಶಿ, ಶಾಂತರಡ್ಡಿ ಪೊಲೀಸ್ ಪಾಟೀಲ್, ಸಿದ್ದರಾಮರೆಡ್ಡಿ ದೇಸಾಯಿ, ರವಿ ನಾಯಕ ಬೈರಿಮರಡಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ವಹಿಸಿದ್ದರು. ಅನೇಕ ಜನ ಗ್ರಾಮದ ಹಿರಿಯರು ಹಾಗೂ ನೂರಾರು ಜನರು ಭಾಗವಹಿಸಿದ್ದರು.