ಯಾದಗಿರಿ | ಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭ : ನಮ್ಮ ಹೋರಾಟಕ್ಕೆ ಸಿಕ್ಕ ಜಯ ; ಜಾಕಾ
ವಡಗೇರಾ : ತಾಲೂಕಿನ ಕೊನೆ ಭಾಗದ ಕಾಲುವೆಗಳ ಹೂಳು ತೆಗೆಸುವಂತೆ ಒತ್ತಾಯಿಸಿ ಹಸಿರು ಸೇನೆ ವಡಗೇರಾ ತಾಲೂಕು ಘಟಕದ ಅಧ್ಯಕ್ಷ ವಿದ್ಯಾಧರ್ ಜಾಕಾ ನೇತೃತ್ವದಲ್ಲಿ ಕಾಲುವೆ ಬಳಿ ಪ್ರತಿಭಟನೆ ಮಾಡಿ ಎಚ್ಚರಿಸಿದ್ದರು.
ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ವಡಗೇರಾ ತಾಲೂಕಿನ ಕೊನೆ ಭಾಗದ ಗ್ರಾಮಗಳ ಕಾಲುವೆಗಳ ಹೂಳೆತ್ತಿಸಿ ಜಾಲಿ ಗಿಡಗಂಟಿ ಮುಳ್ಳುಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು. ರೈತ ಸಂಘದ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕ ಹರ್ಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿ, ಅವರು ಮಾತನಾಡಿದರು.
ನಮ್ಮ ಮನವಿಗೆ ಸ್ಪಂದಿಸಿ ಕಾಲುವೆಗಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಈಗಾಗಲೇ ಜೋಳ ಸಜ್ಜಿ ಕಡಲೆ ಶೇಂಗಾ ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ಕೊನೆ ಭಾಗದ ರೈತರಿಗೆ ನೀರಿನ ಅವಶ್ಯಕತೆ ಇದ್ದು, ಹಂತ ಹಂತವಾಗಿ ಸಮರ್ಪಕವಾಗಿ ಕಾಲುವೆಗಳಿಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಶರಣು ಜಡಿ, ತಾಲೂಕು ಕಾರ್ಯದರ್ಶಿ ಸತೀಶ್ ಪೂಜಾರಿ, ಮಲ್ಲು ನಾಟೇಕಾರ, ತಿರುಮಲ ಕಲಾಲ, ನಿಂಗು ಕುರ್ಕಳಿ, ದರ್ಶನ್ ಗುತ್ತೇದಾರ್ ,ಮರೇಪ್ಪ ಬಾಡದ, ಯಲ್ಲಪ್ಪ ಕರಿಕಳ್ಳಿ, ಹಾಗೂ ಇನ್ನಿತರರು ಇದ್ದರು.