ಯಾದಗಿರಿ | ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ
ಯಾದಗಿರಿ : ಮನುಷ್ಯನಿಗೆ ನೇತ್ರಗಳು ಅತ್ಯಂತ ಪ್ರಮುಖವಾಗಿವೆ. ಇವುಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ವೈದ್ಯಾಧಿಕಾರಿಗಳು ಮತ್ತು ನೇತ್ರಾಧಿಕಾರಿ ಸಿಬ್ಬಂದಿ ವರ್ಗ, ಡಿಡಿಯು ಶಿಕ್ಷಣ ಸಂಸ್ಥೆ, ಡಾ.ಭೀಮಣ್ಣ ಮೇಟಿ ಫೌಂಡೇಶನ್ ವತಿಯಿಂದ ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಆಗಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ್ಯತನ ಮಾಡುವ ಕೆಲಸ ಎಂದಿಗೂ ಮಾಡಬಾರದು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಸುದರ್ಶನಾಯಕ ಮಾತನಾಡಿ, ಮನುಷ್ಯನಿಗೆ ಎಲ್ಲ ಅಂಗಗಳಂತೆ ನೇತೃಗಳು ತುಂಬ ಪ್ರಮುಖವಾದ ಸ್ಥಾನ ವಹಿಸುತ್ತವೆ. ಹೀಗಾಗಿ ಎಚ್ಚರಿಕೆ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಚನ್ನಕೇಶವಗೌಡ ಬಾಣತಿಹಾಳ ಮಾತನಾಡಿ, ಕಣ್ಣುಗಳು ಅವಿಭಾಜ್ಯ ಅಂಗವಾಗಿವೆ. ಹೀಗಾಗಿ ನಾವು ಸದಾ ಜಾಗೃತಿ ವಹಿಸಬೇಕು. ಇದರಿಂದಾಗಿ ತುಂಬ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಶಿಬಿರದಲ್ಲಿ 600 ರೊಗಿಗಳನ್ನು ತಪಾಸಣೆ ಮಾಡಲಾಯಿತು. 90 ಜನರ ನೇತ್ರ ಶಸ್ತ್ರ ಚಿಕಿತ್ಸೆಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಭೀಮರಾಯ ಠಾಣಗುಂದಿ, ಡಾ.ನಿಖಿತಾ, ಅಬ್ದುಲ್ ಕಿಲ್ಲನಕೇರಾ, ಶೇಕ್ ಇಮ್ರಾನ್, ಶಿವ ಪ್ರಕಾಶ್ ಇದ್ದರು. ವೆಂಕಟೇಶ ಬೆಳಗೇರಾ ಸ್ವಾಗತಿಸಿ, ನಿರೂಪಿಸಿದರು.