×
Ad

ಯಾದಗಿರಿ | ವಿಶಾಖಪಟ್ಟಣಂ ರೈಲ್ವೆ ಡಿವಿಷನ್ ಸೇರ್ಪಡೆಯ ಪ್ರಸ್ತಾವನೆ ಕೈ ಬಿಡಲು ಸಚಿವರಿಗೆ ಶಾಸಕ ತುನ್ನೂರು ಮನವಿ

Update: 2025-01-29 16:06 IST

ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ವಿಶಾಖಪಟ್ಟಣಂ ರೈಲ್ವೆ ಡಿವಿಷನ್ ಗೆ ಸೇರಿಸುವ ಪ್ರಸ್ತಾವನೆ ಕೈ ಬಿಡುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು, ರಾಜ್ಯ ರೈಲ್ವೇ ಸಚಿವ ವಿ.ಸೋಮಣ್ಣ ಅವರನ್ನು ಒತ್ತಾಯಿಸಿದ್ದಾರೆ.

ಇಂದು ಸಚಿವ ಸೋಮಣ್ಣ ಅವರನ್ನು ಸಂಪರ್ಕಿಸಿದ ಶಾಸಕರು ಗುಂತಕಲ್ ರೈಲ್ವೆ ಡಿವಿಷನ್ ನಲ್ಲಿ ಯಾದಗಿರಿ ಮುಂದುವರಿಸಬೇಕು. ವಿಶಾಖಪಟ್ಟಣಂ ಸೇರ್ಪಡೆಗೆ ಜಿಲ್ಲೆಯ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಡಳಿತಾತ್ಮಕ ಕೆಲಸ ಕಾರ್ಯಕ್ಕೇ ವಿಶಾಖಪಟ್ಟಣ ದೂರವಾಗಲಿದೆ ಕಾರಣ ಯಾದಗಿರಿ ಗುಂತಕಲ್ ನಲ್ಲೆ ಮುಂದುವರಿಸಲು ಮನವಿ ಮಾಡಿದ್ದಾಗಿ ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮನವಿಗೆ ಸಕಾರಾತ್ಮಕ ಸ್ಪಂದಿಸಿದ ಸಚಿವ ಸೋಮಣ್ಣ ಅವರು ನಿಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಯಾವುದೇ ಕಾರಣಕ್ಕೂ ಯಾದಗಿರಿ ರೈಲು ನಿಲ್ದಾಣವನ್ನು ವಿಶಾಖಪಟ್ಟಣಂ ವಿಭಾಗಕ್ಕೆ ಸೇರಿಸುವುದನ್ನು ಕೈ ಬಿಡಲಾಗುತ್ತದೆ. ಯಥಾವತ್ತಾಗಿ ಗುಂತಕಲ್ ಡಿವಿಜನ್ ನಲ್ಲೆ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಂದೇ ಭಾರತ್ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ಯಾದಗಿರಿಗೆ ನಿಲುಗಡೆ ಮಾಡಲಾಗಿದೆ. ಇನ್ನೂ ಅನೇಕ ರೈಲುಗಳ ನಿಲುಗಡೆ ಆಗಬೇಕಿದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು. ನಿಲುಗಡೆಯಾಗದ ರೈಲುಗಳ ಪಟ್ಟಿ ತರಿಸಿಕೊಂಡು ಎಲ್ಲಾ ರೈಲುಗಳನ್ನು ಹಂತ ಹಂತವಾಗಿ ಯಾದಗಿರಿಗೆ ನಿಲುಗಡೆ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಶೀಘ್ರದಲ್ಲೇ ಸಚಿವರನ್ನು ಭೇಟಿ ಮಾಡಿ ನಿಲುಗಡೆ ಆಗಬೇಕಿರುವ ರೈಲುಗಳನ್ನು ಪಟ್ಟಿ ಮಾಡಿ ಸಚಿವರಿಗೆ ಸಲ್ಲಿಸುವುದಾಗಿ ಶಾಸಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News