×
Ad

ಯಾದಗಿರಿ | ಜ.20 ರಂದು ನಗರಸಭೆ ಕಟ್ಟಡ ಉದ್ಘಾಟನೆ : ಅಧ್ಯಕ್ಷೆ ಅನಪುರ ಮಾಹಿತಿ

Update: 2025-01-10 17:02 IST

ಯಾದಗಿರಿ : ಕೊನೆಗೂ ನೂತನ ನಗರಸಭೆ ಕಟ್ಟಡದ ಉದ್ಘಾಟನೆಗೆ ಮೂರ್ಹತ ನಿಗದಿಯಾಗಿದ್ದು, ಸುಸಜ್ಜಿತ ಮತ್ತು ಲಿಫ್ಟ್ ಸೌಲಭ್ಯ ಹೊಂದಿರುವ ಭವ್ಯ ಕಟ್ಟಡದ ಉದ್ಘಾಟನೆಗೆ ಜ.20 ರಂದು ನಿಗದಿಗೊಳಿಸಲಾಗಿದೆ ಎಂಬ ಮಾಹಿತಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ತಿಳಿಸಿದ್ದಾರೆ.

ನಗರಸಭೆ ಸರ್ವ ಸದಸ್ಯರ ಸಭೆ ಹಾಗೂ ಗುರುವಾರ ಸಂಜೆ ನೂತನ ಕಟ್ಟಡದ ವಿಕ್ಷಣೆ ಮಾಡಿರುವ ಅಧ್ಯಕ್ಷರು ಉಳಿದ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೌರಾಡಳಿತ ಸಚಿವ ರಹಿಂಖಾನ್ ಕಟ್ಟಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಸೇರಿದಂತೆಯೇ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅನಪುರ ತಿಳಿಸಿದ್ದಾರೆ.

ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ನಗರಸಭೆ ಅಧಿಕಾರಿಗಳ ಸಭೆ ನಡೆಸಿರುವ ಅವರು, ಜಿಲ್ಲೆಯಲ್ಲಿ ಮಾದರಿ ಕಟ್ಟಡ ಇದಾಗಿದ್ದು, ಯಾವುದೇ ಲೋಪ ಆಗದಂತೆಯೆ ಯಶಸ್ಸಿಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರಸಭೆ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಉಪಾದಕ್ಷರಾದ ರುಕಿಯಾ ಬೇಗಂ ಮತ್ತು ನಗರಸಭೆ ಸದಸ್ಯರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News