ಯಾದಗಿರಿ | ಮಡಿವಾಳ ಮಾಚಿದೇವ ಜಯಂತಿ ಆಚರಣೆ
ಸುರಪುರ : ನಗರದ ಬಸ್ ನಿಲ್ದಾಣ ಬಳಿಯಲ್ಲಿನ ಮಡಿವಾಳ ಮಾಚಿದೇವ ವೃತ್ತದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಪೂಜೆ ನೆರವೇರಿಸಿದರು.
ತಾಲೂಕು ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗೋಗಿ ಮಾತನಾಡಿ, ವೀರ ಗಣಾಚಾರಿ ಮಡಿವಾಳ ಮಾಚಿದೇವ ಎಂದು ಕರೆಯಲ್ಪಡುವ ಮಡಿವಾಳ ಮಾಚಿದೇವ ಅವರು, 12ನೇ ಶತಮಾನದ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದರು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವ ಅವರ ಕಾಯಕ ಅತಿ ಮಹತ್ವದ್ದಾಗಿತ್ತು ಎಂದು ಹೇಳಿದರು.
ತಹಶೀಲ್ದಾರ್ ಎಚ್.ಎ.ಸರಕಾವಸ್, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರಾದ ಸಮಾಜದ ಪ್ರಮುಖರಾದ ಧರ್ಮರಾಜ ಮಡಿವಾಳರ, ಸಂತೋಷ ಮಡಿವಾಳರ, ದಯಾನಂದ ಗೋಡಗೇರ, ಪ್ರಜ್ವಲ್ ಕಟ್ಟಿಮನಿ, ಮಂಜುನಾಥ ಗೋಗಿ, ಶರಣು ಮಡಿವಾಳರ, ಚಂದ್ರು ಮಡಿವಾಳರ,ಪ್ರೇಮ್, ಚಂದ್ರಶೇಖರ ಮಡಿವಾಳರ, ಮೌನೇಶ, ಕಾಶೀನಾಥ ಇತರರಿದ್ದರು.