×
Ad

ಯಾದಗಿರಿ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

Update: 2025-02-08 20:04 IST

ಯಾದಗಿರಿ : ನಿಮ್ಮೂರಿನ ಋಣ ನನ್ನ ಮೇಲೆ ತುಂಬಾ ಇದೆ ಯಾರು ಎಷ್ಟೆ ತಂತ್ರ ಕುತಂತ್ರ ನಡೆಸಿದರೂ ಯಾವುದೇ ರಾಜಕೀಯ ಆಸೆ ಆಮೀಷಗಳಿಗೆ ಬಲಿಯಾಗದೆ ನೀವು ಅಂದು ಕೈ ಹಿಡಿದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ, ನಿಮ್ಮ ಋಣ ತೀರಿಸುವ ಕೆಲಸ ಇಂದು ನಾನು ಮಾಡುತ್ತಿದ್ದೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅರಕೇರಾ (ಬಿ) ಗ್ರಾಮಸ್ಥರಲ್ಲಿ ಹೊಸ ಚೈತನ್ಯದ ಭರವಸೆಯ ನುಡಿಗಳನ್ನಾಡಿದರು.

ಗುರುಮಠಕಲ್ ಮತಕ್ಷೇತ್ರದ ಅರಕೇರಾ(ಬಿ) ಗ್ರಾಮದಲ್ಲಿ ಬಾಬು ಜಗಜೀವನರಾಂ ಮೂರ್ತಿ ಅನಾವರಣ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಯಾವುದೇ ಕಾರಣಕ್ಕೂ ಅಭಿವೃದ್ಧಿಯ ದೃಷ್ಠಿಯಿಂದ ರಾಜಕೀಯ ಮಾಡಲ್ಲ, ರಾಜಕೀಯ ಚುನಾವಣೆ ಸಮಯದಲ್ಲಿ ಮಾತ್ರ, ಅಭಿವೃದ್ಧಿ ಮಾಡುತ್ತಿರುವುದು ನನ್ನ ನಂಬಿದ ಜನರ ಉದ್ದಾರಕ್ಕಾಗಿ ಎಂದು ಹೇಳಿದರು.

ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಎಲ್ಲಾ ಸಮುದಾಯದ ಜೊತೆಗೆ ನಿಮ್ಮ ಸಮಾಜಕ್ಕೂ ಈ ಸಲ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.

ಸಮಾಜದ ಏಳ್ಗೆಗೆಯಲ್ಲಿ ಯುವಕ ಪಾತ್ರ ಹಿರಿದಾಗಿದೆ. ಯುವ ಜನರು ಉದ್ಯೋಗವಂತರಾದರೆ ಅವರ ಕುಟುಂಬದ ಆರ್ಥಿಕ ಶಕ್ತಿ ಹೆಚ್ಚಾಗಲಿದ್ದು, ನಮ್ಮ ಕ್ಷೇತ್ರಾಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಕೇರಾ ಪರಮಾನಂದೇಶ್ವರ ಮಠದ ಪೀಠಾಧಿಪತಿ ಗುರುಲಿಂಗ ಮಹಾಸ್ವಾಮಿ, ಎಸ್.ಎಚ್.ಮುದ್ನಾಳ, ಕೆಆರ್ಡಿಎಲ್ ಅಧಿಕಾರಿ ಶಿವರಾಜ ಹುಡೇದ್, ಅರಕೇರಾ ಗ್ರಾಪಂ ಅಧ್ಯಕ್ಷರಾದ ಬಸ್ಸಮ್ಮರಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಶರಣಗೌಡ ಸಾಹುಕಾರ, ಮಲ್ಲಣ್ಣ ದಾಸನಕೇರಿ, ಡಾ.ಭೀಮರಾಯ ಲಿಂಗೇರಿ, ಸ್ವಾಮಿದೇವ ದಾಸನಕೇರಿ, ನರಸಪ್ಪ ಕವಡೆ, ತಾಯಪ್ಪ ಬದ್ದೇಪಲ್ಲಿ, ಈಶ್ವರನಾಯಕ ರಾಠೋಡ ಸೇರಿದಂತೆ ಇತರರಿದ್ದರು.

ಅರಕೇರಾ ಬಿ ಗ್ರಾಮದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ 2 ಶಾಲಾ ಕೋಣೆಗಳ ನಿರ್ಮಾಣ ಹಾಗೂ 50ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ಮತ್ತು ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಹಾಗೇಯೇ ಅರಕೇರಾ ಬಿ ಗ್ರಾಮದಿಂದ ಹೆಡಗಿಮದ್ರಾ ಗ್ರಾಮದವರೆಗೆ 1 ಕೋಟಿ 85 ಲಕ್ಷ ರೂ. ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ, 10ಲಕ್ಷ ರೂ. ವೆಚ್ಚದಲ್ಲಿ ಅರಕೇರಾ ಡಾಲೇರ್ ತಾಂಡಾ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಖಾನಳ್ಳಿ ಗ್ರಾಮದಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ 3 ಶಾಲೆ ಕೋಣೆಗಳ ನಿರ್ಮಾಣ ಹಾಗೂ 18 ಲಕ್ಷ ರೂ. ವೆಚ್ಚದಲ್ಲಿ 1 ಅಂಗನವಾಡಿ ಕಟ್ಟಡ ನಿರ್ಮಾಣ, 10 ಲಕ್ಷ ರೂ. ವೆಚ್ಚದಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ ಮಾಡಲಾಗಿದೆ.

- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್ ಮತಕ್ಷೇತ್ರ

ಗುರುಮಠಕಲ್ ಮತಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಯುವ ಶಾಸಕ ಶರಣಗೌಡ ಕಂದಕೂರ ಆರಿಸಿ ಬಂದ ಮೇಲೆ ಆಗುತ್ತಿದೆ, ಅವರ ತಂದೆ ಲಿಂ.ನಾಗನಗೌಡ ಕಂದಕೂರ ಇದ್ದಾಗೂ ಕೂಡ ಅಭಿವೃದ್ಧಿ ಆಗಿದೆ, ಅದರ ಜೊತೆಗೆ ಈ ಹಿಂದೆಯೂ ಆಗಿತ್ತು ಆದರೆ ಈಗ ಅತಿಹೆಚ್ಚು ಅಭಿವೃದ್ಧಿಯಾಗುತ್ತಿರುವುದು ವಿರೋಧ ಪಕ್ಷದವರೂ ಕೂಡ ಶಾಸಕರನ್ನು ಹೊಗಳುವಂತೆ ಮಾಡುತ್ತಿದೆ.

- ಮಲ್ಲಣ್ಣ ದಾಸನಕೇರಿ, ಮಾದಿಗ ಸಮಾಜದ ಹಿರಿಯ ಮುಖಂಡರು, ಯಾದಗಿರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News