ಯಾದಗಿರಿ | ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ, ಚೈತನ್ಯ ಮೂಡುತ್ತದೆ : ಡಾ.ಸಂಜೀವಕುಮಾರ ಸಿಂಗ್
ಯಾದಗಿರಿ : ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ, ಮತ್ತು ಚೈತನ್ಯ ಮೂಡುತ್ತದೆ’ ಎಂದು ರಕ್ತದಾನ ಶಿಬಿರದಲ್ಲಿ ಶಿಕ್ಷಕರಿಗೆ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ.ಸಂಜೀವಕುಮಾರ ಸಿಂಗ್ ರಾಯಚೂರ್ಕರ್ ಅವರು ಹೇಳಿದರು.
ಯಾದಗಿರಿ ನಗರದ ವಡಗೇರಾ ರಸ್ತೆಯಲ್ಲಿ ಬರುವ ಅಜೀಂ ಪ್ರೇಮ್ಜೀ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಜ.17ರ ಶುಕ್ರವಾರದಂದುʼ ಮಕ್ಕಳ ಕಲಿಕಾ ಮೇಳ ಹಾಗೂ ರಕ್ತದಾನ ಶಿಬಿರವನ್ನು ಕಾರ್ಯಕ್ರಮʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ ಮತ್ತು ಚೈತನ್ಯ ಮೂಡುತ್ತದೆ’ ಎಂದು ಶಿಕ್ಷಕರು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಿದರು. ಶಾಲೆಯ ಪ್ರಾಂಶುಪಾಲರಾದ ಅನಿಲ್ ಎಸ್ ಅಂಗಡಿಕಿ ಅವರು ರಕ್ತದಾನದ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟರು. ಈ ಶಿಬಿರದಲ್ಲಿ 50 ಜನ ದಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಮೇಳವನ್ನು ಆಯೋಜಿಸಲಾಗಿದ್ದು 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ವಿವಿಧ ವಿಷಯಗಳಲ್ಲಿ ತಾವು ಕಲಿತ ವಿಷಯಾಂಶಗಳನ್ನು ಹಂಚಿಕೊಂಡರು. ಶಾಲಾ ವಾರ್ಷಿಕೋತ್ಸವದ ಮುಂದುವರೆದ ಭಾಗವಾಗಿ ಜ.18ರ ಶನಿವಾರ ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರು, ಪಾಲಕರು ಇನ್ನಿತರರು ಉಪಸ್ಥಿತರಿದ್ದರು.