×
Ad

ಯಾದಗಿರಿ | ಅಭಿವೃದ್ಧಿಯಲ್ಲಿ ರಾಜಕೀಯ ಬೇಡ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

Update: 2025-01-31 21:04 IST

ಯಾದಗಿರಿ : ನಗರಸಭೆ ಎಲ್ಲ ಸದಸ್ಯರೂ ಒಂದುಗೂಡಿ ಕೆಲಸ ಮಾಡುವ ಮೂಲಕ ಅಭಿವೃದ್ಧಿ ಮಾಡೋಣ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಶುಕ್ರವಾರ ಸಂಜೆ ನಗರಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರಸಭೆಗೆ ಅನುದಾನ ಸೇರಿದಂತೆಯೇ ವಿವಿಧ ಯೋಜನೆಗಳ ಜಾರಿಗೊಳಿಸಲು ಬೇಕಾದ ಅನುಕೂಲಗಳನ್ನು ಪಡೆಯಲು ಸಿಎಂ ಸಿದ್ದರಾಮಯ್ಯ ಅವರಿಗೆ ನಗರಸಭೆ ಅಧ್ಯಕ್ಷರ ನೇತ್ವತೃದಲ್ಲಿ ಒಂದು ನಿಯೋಗ ಬೆಂಗಳೂರಿಗೆ ಬನ್ನಿ, ನಾನು ಅವರ ಸಮಯ ನಿಗದಿಪಡಿಸಿ ಭೇಟಿಯಾಗೊಣ ಎಂದರು.

ಆಶ್ರಯ ಸಮಿತಿಯಿಂದ ಮನೆಗಳಿಗಾಗಿ ಬಂದ ಅರ್ಜಿಗಳು ಎಷ್ಟು, ಎಷ್ಟು ಜಾಗ ಬೇಕೆಂಬ ಬಗ್ಗೆ ತಿಳಿಸಿದರೇ ಅಧ್ಯಕ್ಷರ ಜೊತೆ ಚರ್ಚಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಳೊಣ ಎಂದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ನಗರದಲ್ಲಿ ಈಗಾಗಲೇ ಇರುವ ಆಶ್ರಯ ಸಮಿತಿ ಸ್ಥಳಗಳನ್ನು ತಿಳಿಸಿ, ಹೊಸ ಅರ್ಜಿಗಳಿಗೆ ಮನೆಗಳು ನೀಡಲು ಸುಮಾರು ನಲವತ್ತು ಎಕರೆ ಜಾಗ ಬೇಕಾಗುವುದೆಂದು ಹೇಳಿದರು.

ಪೌರಾಯುಕ್ತ ಉಮೇಶ ಚವ್ಹಾಣ ಸ್ವಾಗತಿಸಿ, ನಿರೂಪಿಸಿದರು. ಇಂಜಿನಿಯರ್ ರಜನಿಕಾಂತ ಆಶ್ರಯ ಸಮಿತಿ ಸ್ಥಳ ಮತ್ತು ಕೆಲಸದ ಬಗ್ಗೆ ವಿವರಿಸಿದರು. ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ವೆಂಕಟರೆಡ್ಡಿ ವನಿಕೇರಿ, ಚನ್ನಕೇಶವ ಬಾಣತಿಹಾಳ, ಹಣಮಂತ ನಾಯಕ್, ಪ್ರಭಾವತಿ ಕಲಾಲ್ ಹಾಗೂ ಆಶ್ರಯ ಸಮಿತಿ ನೂತನ ಸದಸ್ಯರಾದ ಪ್ರಭಾಕರ್ ಜಿ., ಆರತಿ ಅಮರೇಶ ಜಾಕ, ಶಿವರಾಜ ಕರದಲ್ಲಿ, ಇಮೇನುವೆಲ್ ಕೃಷ್ಣಫರ್ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News