ಯಾದಗಿರಿ | ಇ ಕಚೇರಿ ಮೂಲಕ ಜನರು ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು : ಶಾಸಕ ಆರ್.ವಿ.ನಾಯಕ
ಯಾದಗಿರಿ/ ಸುರಪುರ : ಇ ಕಚೇರಿ ಎನ್ನುವುದು ಸರಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಜನರಿಗೆ ಅಗತ್ಯ ಎಲ್ಲಾ ದಾಖಲೆಗಳು ಸುಲಭವಾಗಿ ದೊರೆಯಲಿವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಇ ಕಚೇರಿಗೆ ಚಾಲನೆ ನೀಡಿ ಮಾತನಾಡಿ, ಜನರು ಇದುವರೆಗೆ ಯಾವುದೇ ದಾಖಲೆಬೇಕಾದರೂ ಕಚೇರಿಗೆ ಅಲೆಯಬೇಕಿತ್ತು. ಆದರೆ ಇನ್ನೂ ಕಚೇರಿಗೆ ಅಲೆಯುವ ಅಗತ್ಯವಿಲ್ಲ, ನಿಮ್ಮ ಪಹಣಿ, ಪತ್ರಿಕೆ, ಇತರೆ ದಾಖಲೆಗಳು ನಿಮ್ಮ ಮನೆಯಲ್ಲಿಯೇ ಕುಳಿತು ನೋಡ ಬಹುದಾಗಿದೆ. ಇಂತಹ ಯೋಜನೆಯನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಹಾಗೂ ಕಂದಾಯ ಸಚಿವರಾದ ಕೃಷ್ಣಬೈರೆಗೌಡ ಅವರಿಗೆ ನಾನು ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಇ ಆಡಳಿತದ ಮೂಲಕ ರೈತರಿಗೆ ಪಹಣಿ ಪತ್ರಿಕೆ ವಿತರಿಸಿದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿ, ಜನರಿಗೆ ಎಲ್ಲಾ ದಾಖಲೆಗಳು ಈ ಮುಂದೆ ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಪೇಪರ್ ಮೂಲಕ ಪಡೆದುಕೊಳ್ಳಬೇಕಿತ್ತು, ಈಗಲೂ ಆ ವ್ಯವಸ್ಥೆ ಇದ್ದರು ಜನರಿಗೆ ಸುಲಭವಾಗಿ ಇ ಕಚೇರಿ ಮೂಲಕ ಪಡೆದುಕೊಳ್ಳಬಹುದಾಗಿ ಎಂದು ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ನಲ್ಲಿ ಆನ್ ಲೈನ್ ಇ ಕಚೇರಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಸಾಹು ನರಸಿಂಗಪೇಟ, ಸೂಗರೇಶ ವಾರದ, ಶಕೀಲ್ ಅಹ್ಮದ್ ,ನಗರಸಭೆ ಸದಸ್ಯರಾದ ನಾಸಿರಹುಸೇನ ಕುಂಡಾಲೆ, ಮಹ್ಮದ್ ಗೌಸ್, ಜುಮ್ಮಣ್ಣ ಕೆಂಗುರಿ, ರವಿ ಸಾಹುಕಾರ ಆಲ್ದಾಳ ಸೇರಿದಂತೆ ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು, ಕೆಂಭಾವಿ ಉಪ ತಹಶೀಲ್ದಾರ್ ರಾಜಾಸಾಬ್ ಹಾಗೂ ಕಂದಾಯ ಇಲಾಖೆಯ ಸಿರಸ್ತೆದಾರರು ಸೇರಿ ಅನೇಕರು ಭಾಗವಹಿಸಿದ್ದರು.