×
Ad

ಯಾದಗಿರಿ | ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ರಾಮಣ್ಣ ಬಳಿಚಕ್ರ, ಉಪಾಧ್ಯಕ್ಷರಾಗಿ ವೆಂಕಟರೆಡ್ಡಿ ಅಣಬಿ ಅವಿರೋಧ ಆಯ್ಕೆ

Update: 2025-02-03 16:10 IST

ಯಾದಗಿರಿ : ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕ್ ನಿ.ದ ನೂತನ ಅಧ್ಯಕ್ಷರಾಗಿ ರಾಮಣ್ಣ ಬಳಿಚಕ್ರ ಕೋಟಗೇರಾ ಹಾಗೂ ಉಪಾಧ್ಯಕ್ಷರಾಗಿ ನಾಗರಡ್ಡಿ ಅಣಬಿ ಹೆಡಗಿಮದ್ರಾ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕ್ನ ಸಭಾಂಗಣದಲ್ಲಿ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ರಾಮಣ್ಣ ಬಳಿಚಕ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಡ್ಡಿ ಅಣಬಿ ಉಭಯ ಅಭ್ಯರ್ಥಿಗಳು ಮಾತ್ರ ಏಕೈಕ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿ ಗಿರಿಜಾ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಪರಿಶೀಲನೆ ಮಾಡಿದ ಚುನಾವಣಾಧಿಕಾರಿ ಕೊನೆಗೆ ಉಭಯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಅಮೃತರಡ್ಡಿ ಪಾಟೀಲ್, ಬಸವರಡ್ಡಿ ಹೆಗ್ಗಣಗೇರಾ, ಶರಣಪ್ಪಗೌಡ ಕೌಳೂರ, ರಾಘವೇಂದ್ರ ರಡ್ಡಿ ಕೊಂಕಲ್, ಮರೆಮ್ಮ, ಶರಣಗೌಡ ಸೌರಾಷ್ಟçಹಳ್ಳಿ, ಬಸವರಾಜ ಕಣೆಕಲ್, ವೆಂಕಟರಾಮಲು ಚಪೆಟ್ಲಾ, ರವಿಪುತ್ರ ಆರ್. ಹೊಸಳ್ಳಿ, ಜಲ್ಲಮ್ಮ ತಾತಳಗೇರಾ, ಬನ್ನಪ್ಪ ಹಳಿಗೇರಿ, ಪಿಎಲ್ಡಿ ವ್ಯವಸ್ಥಾಪಕ ಅಯ್ಯಣರಡ್ಡಿ, ಸಿದ್ದಯ್ಯ ಕಲಾಲ್ ಯಳವಾರ ಹಾಜರಿದ್ದರು.

ಪತ್ರಿಕೆಯೊಂದಿಗೆ ನೂತನ ಅಧ್ಯಕ್ಷ ರಾಮಣ್ಣ ಬಳಿಚಕ್ರ ಮಾತನಾಡಿ, ನಾನು ದಿ. ಸದಾಶಿವರಡ್ಡಿ ಕಂದಕೂರ, ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವರ ಸಂಪರ್ಕದ ಮೂಲಕ ರಾಜಕೀಯ ಪ್ರವೇಶ ಮಾಡಿ, ಕಳೆದ 40 ವರ್ಷಗಳಿಂದ ಆ ಮನೆತನಕ್ಕೆ ಹಾಗೂ ಜೆಡಿಎಸ್ ಪಕ್ಷಕ್ಕೆ ನಿಷ್ಟಾವಂತ ಕಾರ್ಯಕರ್ತನಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ನನ್ನ ಸೇವೆ ಗುರುತಿಸಿ ಶಾಸಕ ಶರಣಗೌಡ ಕಂದಕೂರ ಅವರು ಹೊಸ ಜವಾಬ್ದಾರಿ, ರಾಜಕೀಯ ಅಧಿಕಾರ ನೀಡಿದ್ದಾರೆ, ಬರುವ ದಿನಗಳಲ್ಲಿ ಗುರುಮಿಠಕಲ್ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವ ಜೊತೆಗೆ ಪಿಎಲ್ಡಿ ಬ್ಯಾಂಕ್ ಮೂಲಕ ಸರ್ಕಾರದಿಂದ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ ಎಲ್ಲರ ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.

ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಲ್ಲಣಗೌಡ ಪಾಟೀಲ್ ಹತ್ತಿಕುಣಿ, ರಾಚನಗೌಡ ಮುದ್ನಾಳ, ಸಿದ್ದಪ್ಪ ಹೊಟ್ಟಿ, ರವೀಂದ್ರ ಮುಂಡರಗಿ, ಆನಂದರಡ್ಡಿ ವಡವಟ್, ನರಸಿಂಹರಡ್ಡಿ ಚಿಂತಗುಂಟಾ, ಬಸವರಾಜ ಚಂಡ್ರಿಕಿ, ನಿಂಗಪ್ಪ ತಳಕ್, ಡಾ. ಆಂಜನೇಯ ಕಡೇಚೂರ, ಸಾಬರಡ್ಡಿ ತಮ್ಮಣ್ಣೋರ ಹತ್ತಿಕುಣಿ, ನರಸಪ್ಪ ಇದ್ಲಿ, ಮಹಾದೇವಪ್ಪ ಕಂದಕೂರ ಸೇರಿದಂತೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News