ಯಾದಗಿರಿ | ಜಯಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ
Update: 2025-01-27 19:49 IST
ಸುರಪುರ : ಇಲ್ಲಿಯ ನಗರಸಭೆ ಕಾರ್ಯಾಲಯದ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನವನ್ನು ಆಚರಿಸಲಾಯಿತು.
ಶಾಸಕ ರಾಜಾ ವೇಣುಗೋಪಾಲ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ ನಾಯಕ ಅವರು ಮಹಾತ್ಮ ಗಾಂಧೀ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣ ನೆರವೇರಿಸಿದರು.
ಜಯ ಕರ್ನಾಟಕ ಸೇನೆ ತಾಲೂಕು ಕಾರ್ಯಾಧ್ಯಕ್ಷ ಶಿವರಾಜ ವಗ್ಗರ ಮಾತನಾಡಿದರು, ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರಾ, ಕೃಷ್ಣಾ ಹಾವಿನ ಕುಂಬಾರಪೇಟ, ರಾಘು ಗೋಗಿಕರ, ಮುಕ್ತಿಯಾರ್, ಆಟೋ ಚಾಲಕರ ಘಟಕದ ಅಧ್ಯಕ್ಷ ಹಣಮಂತ ಭಂಡಾರಿ, ಗೂಡ್ಸ ಚಾಲಕರ ಸಂಘದ ಅಧ್ಯಕ್ಷ ರಂಗಪ್ಪ ರುಕ್ಮಾಪುರ, ಹಣಮಂತ ಶುಕ್ಲಾ, ಸಾಯಬಣ್ಣ ಕೋಟೆ,ಸಿದ್ದ ತುಮಕೂರು, ನಾಗು ಕರಿಗಾರ ಇತರರಿದ್ದರು.