ಯಾದಗಿರಿ | ಕುಡಿಯುವ ನೀರು ಸರಬರಾಜು ನಳದ ಬಿಲ್ ಪರಿಷ್ಕರಣೆಗೆ ಮನವಿ
ಸುರಪುರ : ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕು ಘಟಕದ ವತಿಯಿಂದ ನಗರಸಭೆಗೆ 24/7 ನೀರಿನ ಬಿಲ್ಲು ಅವೈಜ್ಞಾನಕವಾಗಿ ನಿಗದಿಪಡಿಸಿ ಕೂಲಿ ಕಾರ್ಮಿಕರಿಗೆ, ಬಡವರಿಗೆ, ವಲಸೆ ಹೋದವರಿಗೂ ನೀರು ಬಳಸದೇ ಇರುವವರಿಗೂ ಮತ್ತು ಅತಿ ಹೆಚ್ಚು ನೀರು ಬಳಕೆ ಮಾಡಿದವರಿಗೂ ಮನಬಂದಂತೆ ಅವೈಜ್ಞಾನಕವಾಗಿ ಒಂದೇ ರೀತಿ ಬಿಲ್ಲು ನೀಡಲಾಗಿದೆ ಎಂದು ಖಂಡಿಸಿ ಮನವಿ ಮಾಡಲಾಯಿತು.
ಕೂಡಲೇ ಬಿಲ್ಲನ್ನು ಪರಿಷ್ಕರಣೆ ಮಾಡಿ ಕರ್ನಾಟಕ ಸರಕಾರದ ನಡುವಳಿಗಳ ಪ್ರಕಾರ ಯಾರು ಎಷ್ಟು ನೀರು ಉಪಯೋಗಿಸುತ್ತಾರೆ ಅಷ್ಟೇ ಪ್ರಮಾಣದ ಬಿಲ್ಲು ನಿಗದಿಪಡಿಸಬೇಕು ನೀರನ್ನು ಬಳಸದೆ ವಲಸೆ ಹೋದವರಿಗೂ ಕೂಡ 1920 ರೂ ಬಿಲ್ಲು ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುವುದು ನಿಲ್ಲಿಸಿ, ಕನಿಷ್ಠ ದರ 56 ರೂ ಪ್ರತಿ ತಿಂಗಳಿಗೆ ನಿಗದಿಪಡಿಸಿ ಮತ್ತು 12 ತಿಂಗಳುಗಳನ್ನು ಪ್ರಾಯೋಗಿಕ ತಿಂಗಳಾಗಿ ಪರಿಗಣಿಸಿ ಕೇವಲ 9 ತಿಂಗಳಿಗೆ ಪ್ರತಿ ತಿಂಗಳಿಗೆ 56 ರಂತೆ ಬಿಲ್ಲು ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಕಾರ್ಯಧ್ಯಕ್ಷರಾದ ಶರಣು ಬೈರಿಮರಡಿ, ತಾಲೂಕು ಅಧ್ಯಕ್ಷರಾದ ಮಲ್ಲು ನಾಯಕ ಕಬಾಡಗೆರಾ, ತಾಲೂಕು ಕಾರ್ಯಧ್ಯಕ್ಷರಾದ ಶಿವರಾಜ ವಗ್ಗರ್, ತಾ.ಕಾರ್ಯದರ್ಶಿಯಾದ ಕೃಷ್ಣ ಹಾವಿನ ಕುಂಬಾರಪೆಟ, ಆಟೋ ಚಾಲಕರ ಘಟಕದ ಅಧ್ಯಕ್ಷರಾದ ಹಣಮಂತ ಭಂಡಾರಿ, ಗೌರವ ಅಧ್ಯಕ್ಷ ಹಣಮಂತ ಶುಕ್ಲ, ಮಲ್ಲಪ್ಪ ಟರ್ಕಿ, ಬಸ್ಸು ಡಿ ಆರ್, ನಹೀಂ ಮುಲ್ಲಾ, ಈಶಪ್ಪ ಟರ್ಕಿ, ಗೊಣೆಪ್ಪಗೌಡ, ಹುಸೇನ್ ರಂಗಂಪೆಟ್, ಹಣಮಂತ ಸಿದ್ದಾಪುರ, ಮಲ್ಲಪ್ಪ ಕೊಂಗಂಡಿ, ಶರಣು ಕೃಷ್ಣಾಪುರ, ಗೋಣೇಶ ರತ್ತಾಳ್, ಮಿರ್ಜಾ ಫೇರುಜ್ ಬೇಗ್ ಮತ್ತು ಇನ್ನಿತರರು ಉಪಸ್ಥಿತರಿದ್ದರು