ಯಾದಗಿರಿ | ನೂತನ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ
ಯಾದಗಿರಿ : ತಾಲೂಕಿನ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಮತ್ತು ನಗರ ಘಟಕಗಳ ಪದಾಧಿಕಾರಿಗಳ ಆಯ್ಕೆಯನ್ನು ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗೌಡಪ್ಪ ಗೌಡ ಆಲ್ದಾಳ ಹೇಳಿದರು.
ವಾಲ್ಮೀಕಿ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ತಾವು ಶ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ನಮ್ಮ ಸಮಾಜದ ಭಾಂದವರು ಶಿಕ್ಷಣದಿಂದ ಹಿಂದುಳಿದಿದ್ದಾರೆ ಅಂತವರನ್ನು ಗುರುತಿಸಿ ಶಿಕ್ಷಣ ನೀಡಬೇಕು ಎಂದು ಅವರ ಪಾಲಕರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ ಮಾತನಾಡಿ, ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮೇಲೆ ತಾವುಗಳು ಜಾಗೃತಿಯಿಂದ ಕೆಲಸ ಮಾಡಬೇಕು. ಸಮಾಜದ ಭಾಂದವರು ವಿಶ್ವಾಸವಿಟ್ಟು ತಮಗೆ ಜವಾಬ್ದಾರಿ ನೀಡಿದ್ದಾರೆ. ಯಾವುದೇ ರೀತಿಯ ಚ್ಯುತಿಯಾಗದಂತೆ ನೋಡಿಕೊಂಡು ಸಮಾಜವನ್ನು ಬಲಿಷ್ಠವಾಗಿ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಪದಾಧಿಕಾರಿಗಳು ಆಯ್ಕೆ :
ಯಾದಗಿರಿ ವಾಲ್ಮೀಕಿ ನಾಯಕ ನಗರ ಘಟಕ ಅಧ್ಯಕ್ಷರನ್ನಾಗಿ ಸಾಬಣ್ಣ ಬಗ್ಲಿ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಹುಲಿನಾಯಕ, ಯಾದಗಿರಿ ವಾಲ್ಮೀಕಿ ನಾಯಕ ತಾಲ್ಲೂಕು ಸಮಾಜದ ಗೌರವ ಅಧ್ಯಕ್ಷರಾಗಿ ಬಸವರಾಜ ಗೊಂದೇನೂರು, ಅಧ್ಯಕ್ಷರಾಗಿ ಸಾಹೇಬಗೌಡ ಗೌಡಗೇರಾ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕವಲ್ದಾರ ಹತ್ತಿಕುಣಿ, ಉಪಾಧ್ಯಕ್ಷರಾಗಿ ಈಶಪ್ಪ ಹೆಡಗಿಮದ್ರಿ ಆಯ್ಕೆ ಯಾಗಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಸಿದ್ದಲಿಂಗಪ್ಪ ನಾಯಕ, ಡಾ.ಪ್ರಭು ಹುಲಿನಾಯಕ, ದೊಡಯ್ಯ ಹಳಿಗೇರಿ, ಶರಣಪ್ಪ ಜಾಕನಹಳ್ಳಿ, ಭೀಮರಾಯ ಠಾಣಗುಂದಿ ಗುರುರಾಜ ಹುಲಕಲ್, ಅಂಬುರಾಜ ದೊರೆ, ಸಿದ್ದು ನಾಯಕ ಹತ್ತಿಕುಣಿ, ಮಲ್ಲು ಕಟಕಟಿ, ಬಸವರಾಜ ಬಾಚವಾರ, ಭೀಮರಾಯ ರಾಮಸಮುದ್ರ, ಮಲ್ಲಿಕಾರ್ಜುನ ನೀಲಹಳ್ಳಿ, ಮೋನಪ್ಪ ಯಾದಗಿರಿ, ಹಣಮಂತ ಬಾಲಚಾಡ, ರಾಮಣ್ಣ ಗೌಡಗೇರ, ಚಂದಪ್ಪ ರಾಮಸಮುದ್ರ, ಬಸವರಾಜ ಸೈದಾಪೂರ, ಬಸವರಾಜಬೆಳಗುಂದಿ, ಸಿದ್ದಪ್ಪ ಕೋಯಿಲೂರು, ಸಿದ್ದಪ್ಪ ಕ್ಯಾಸಪನಹಳ್ಳಿ, ನಾಗಪ್ಪ ಠಾಣಗುಂದಿ, ಕಾಶಪ್ಪ ಅಬ್ಬೆತುಮಕೂರು, ವಿಶ್ವನಾಥ ಠಾಣಗುಂದಿ, ಸಾಬು ನೀಲಹಳ್ಳಿ, ಪೋಲಪ್ಪ ನೀಲಹಳ್ಳಿ, ಮಂಜುನಾಥ ಬಳಿಚಕ್ರ, ರವಿ ಆರ್ ಹೋಸಳ್ಳಿ, ಜಗದೀಶ ನಾಯಕ ಹಳಿಗೇರ, ಜಟ್ಟೇಪ್ಪ ನಾಯಕ ಠಾಣಗುಂದಿ, ಖಂಡಪ್ಪ ಹಳಿಗೇರಾ, ರಾಮಚಂದ್ರ ಗೌಡಗೇರಾ ಮತ್ತಿತರರು ಉಪಸ್ಥಿತರಿದ್ದರು.