ಯಾದಗಿರಿ | ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಯಾದಗಿರಿ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಗೋಗಿ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ (ಕೆ) ಗ್ರಾಮದ ಕಡೆಯಿಂದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾವನ್ನು ತುಂಬಿಕೊಂಡು ಜಿಲ್ಲೆಯ ಶಹಾಪುರ ತಾಲ್ಲೂಕಿನ ಕಂಚನಕವಿ, ಕೊಡಮನಹಳ್ಳಿ ಮೂಲಕ ದ್ವಿಚಕ್ರ ವಾಹನದಲ್ಲಿ ಸಿಂಧಗಿ ಪಟ್ಟಣಕ್ಕೆ ಶುಕ್ರವಾರ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೋಗಿ ಠಾಣೆ ಪಿಎಸ್‌ಐ, ಸಿಬ್ಬಂದಿಗಳು ಸೇರಿ ದಾಳಿ ನಡೆಸಿ ಬಂಧಿಸಿದ್ದಾರೆ.
ದೇವದುರ್ಗ ತಾಲ್ಲೂಕಿನ ದೇವರಗುಡ್ಡ ನಿವಾಸಿ ಸಂತೋಷ (24), ಶಹಾಪುರದ ಫಿಲ್ಟರ್ ಬೆಡ್ ನಿವಾಸಿ ರವಿ (32) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
55 ಸಾವಿರ ರೂ. ಬೆಲೆ ಬಾಳುವ 1.8 ಕೆಜಿ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಗೋಗಿ ಠಾಣೆ ಪಿಎಸ್‌ಐ ದೇವೆಂದ್ರರೆಡ್ಡಿ ಅವರು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಗೋಗಿ ಠಾಣೆ ಪಿ.ಎಸ್.ಐ(ತನಿಖಾ) ಚಂದ್ರನಾಥ ಹಾಗೂ ಸಿಬ್ಬಂದಿಗಳಾದ ದೇವಿಂದ್ರಪ್ಪ, ಶರಣಗೌಡ, ಬಂದೇನವಾಜ, ನಾಗರಾಜ, ಬಸನಗೌಡ, ಚಂದ್ರಶೇಖರ, ವಾಹನ ಚಾಲಕ ಮಾಳಿಂಗರಾಯ, ಹಾಗು ಪತ್ರಾಂಕಿತ ಅಧಿಕಾರಿಗಳು ಇದ್ದರು.