ಯಾದಗಿರಿ | ಬಾಲ್ಯ ವಿವಾಹ ಕಡಿವಾಣಕ್ಕೆ ಮುಂದಾಗಿ : ಉಮೇಶ ಕೆ.ಮುದ್ನಾಳ
ಯಾದಗಿರಿ : ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಬಾಲ್ಯ ವಿವಾಹ ತಡೆಯಲು ಸಾಕಷ್ಟು ಜಾಗೃತಿ ಮೂಡಿಸಿದರು ಕೂಡ ಬಾಲ್ಯ ವಿವಾಹ ನಿರಂತರ ನಡೆಯುತ್ತಿದ್ದು ದುರಷ್ಟಕರು ಸಂಗತಿ ಎಂದು ಕೋಲಿ ಸಮಾಜದ ಜನಜಾಗೃತಿ ಅಭಿಯಾನದಲ್ಲಿ ಕರ್ನಾಟಕ ಪ್ರದೇಶ ಕೋಲಿ ಸಮಾಜ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ರಾಜ್ಯ ಸರ್ಕಾರದಿಂದ ಜ.21 ರಂದು ನಡೆಯುವ ನಿಜಶರಣ ಅಂಬಗೇರ ಚೌಡಯ್ಯನವರ ಜಯಂತತ್ಯೋತ್ಸವ ಅಂಗವಾಗಿ ಗ್ರಾಮದಲ್ಲಿರುವ ದ್ಯಾವಮ್ಮ ಆಯಿ ಆಂಜನೇಯ ಅಂಬಿಗರ ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಬೇಕು. ಬಾಲ್ಯ ವಿವಾಹ ಒಂದು ದೊಡ್ಡ ಪೀಡಗು ಇದನ್ನು ತೊಲಗಿಸಲು ಜಾಗೃತರಾಗಿ, ಬಾಲ್ಯ ವಿವಾಹ ಆಗದಂತೆ ಮುಂಜಾಗೃತಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಮಲ್ಲೇಶಿ, ಶ್ರೀನಿವಾಸರಡ್ಡಿ, ದೇವಪ್ಪ, ಹಣಮಂತ, ಬುಗ್ಗಪ್ಪ, ಯಲ್ಲಪ್ಪ, ಹುಸೇನಪ್ಪ, ನಾಗಪ್ಪ, ಮಹೇಶ, ಕಾಂತಪ್ಪ, ಅನೀಲಕುಮಾರ, ಶರಣಪ್ಪ, ಶಂಕರ, ಮಹಾದೇವ, ಬಸವಂತ, ನಾಗರಾಜ, ಲಾಲಪ್ಪ, ಪರಶುರಾಮ, ಜಗದೀಶ, ದೇವಮ್ಮ, ಅಮೃತಮ್ಮ, ಲಾಲಮ್ಮ, ತಾಯಮ್ಮ, ಮಾಣಿಕೆಮ್ಮ, ನಾವಿತಮ್ಮ, ಪಾರ್ವತೆಮ್ಮ, ಹುಸೇನಮ್ಮ, ನರಸಮ್ಮ, ಚನ್ನಮ್ಮ, ಬಾಲಮ್ಮ, ಯಲ್ಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.