×
Ad

ಯಾದಗಿರಿ | ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಿ : ಶಿಲ್ಪಾ ಬಿ.ಕೆ.

Update: 2025-01-19 19:45 IST

ಯಾದಗಿರಿ : ಮೊಬೈಲ್, ಆನ್ ಲೈನ್ ಗೇಮ್ಸ್ ನ ಗೀಳಿಗೆ ಬೀಳುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒಗ್ಗಟ್ಟಿನಿಂದ ತಮ್ಮನ್ನೇ ತಾವು ತೊಡಗಿಸಿಕೊಳ್ಳುವ ಕ್ರೀಡೆಗಳನ್ನು ಆಡಿಸುವುದು ಬಹಳ ಪ್ರಮುಖವಾಗಿದ್ದು, ಮಕ್ಕಳು ಹೆಚ್ಚೆಚ್ಚು ಈ ರೀತಿಯ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಎ.ಐ.ಡಿ.ಎಸ್.ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು ಹೇಳಿದರು.

ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 127ನೇ ಜನ್ಮದಿನದ ಪ್ರಯುಕ್ತವಾಗಿ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆಯಿಂದ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಕಬ್ಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆಗಳಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ತೀರ್ಪುಗಾರರಾಗಿ ಹೊನಗೇರಾ ಗ್ರಾಮದ ಸರಕಾರಿ ಪ್ರಾಢಶಾಲೆಯ ದೈಹಿಕ ಅತಿಥಿ ಶಿಕ್ಷಕರಾದ ಅಮಾತ್ಯಪ್ಪ ಹಾಗೂ ಕಂಚಗಾರಹಳ್ಳಿಯ ಸುಭಾಸ್ ಚಂದ್ರ ಅವರು ಆಗಮಿಸಿದ್ದರು. 8 ವಾಲಿಬಾಲ್ ತಂಡಗಳು ಹಾಗೂ 6 ಕಬ್ಬಡ್ಡಿ ತಂಡಗಳು ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಹಳ ಉತ್ತಮ ಪ್ರದರ್ಶನವನ್ನು ನೀಡಿದರು.

ಎ.ಐ.ಡಿ.ಎಸ್.ಓ ಯರಗೋಳ ಸಂಘಟನಾಕಾರರಾದ ಜಗನ್ನಾಥ, ನಿಂಗಪ್ಪ, ಲಕ್ಷ್ಮಿಕಾಂತ, ರೆಡ್ದೆಪ್ಪ, ಸದಾನಂದ, ಮಹೇಶ್, ನವೀನ್, ಯಮುನಾ, ಕಾವ್ಯ, ಯಶೋಧಾ, ಶಾಹಿನ್, ಚೈತ್ರಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News