ಯಾದಗಿರಿ | ಸ್ಪರ್ಶ ಕುಷ್ಠರೋಗ ಅರಿವು ಜಾಗೃತಿ ಕಾರ್ಯಕ್ರಮ
ಯಾದಗಿರಿ : ಕುಷ್ಠರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ರೋಗ, ಮಹತ್ಮಾ ಗಾಂಧೀಜಿಯವರ ಕಂಡ ಕನಸಾದ ಕುಷ್ಠರೋಗ ಮುಕ್ತ ಭಾರತವನ್ನಾಗಿ ಎಲ್ಲರ ಜವಾಬ್ದಾರಿ ಮಹತ್ಮಾ ಗಾಂಧೀಜಿಯವರ ಕಂಡ ಕನಸು ನನಸಾಗಿಸೋಣ. ಎಂಬುವುದರ ಮುಖಾಂತರ ಪ್ರತಿಜ್ಞೆಯನ್ನು ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗ ಜಿಲ್ಲಾ ಪಿ.ಎಮ್.ಡ್ಯ್ಲೂಂ ಬಸ್ಸಯ್ಯ ಗುತ್ತೇದಾರ ಅವರು ಹೇಳಿದರು.
ಯಾದಗಿರಿ ನಗರದ ಸರಕಾರಿ ಪ್ರೌಢ ಶಾಲೆ ಸ್ಟೇಶನ್ ಬಜಾರ್ ಶಾಲೆಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಷ್ಠರೋಗವು ಹಿಂದಿನ ಕಾಲದಿಂದಲೂ ಬಂದಿರತಕ್ಕಂತ ರೋಗ, ಈ ರೋಗವು ಹೇಗೆ ಹರಡುತ್ತದೆ? ಈ ರೋಗದ ಲಕ್ಷಣಗಳು ಯಾವ ರೀತಿ ಇರುತ್ತವೆ ಮತ್ತು ಈ ರೋಗಕ್ಕೆ ಸಂಪೂರ್ಣವಾದ ಚಿಕಿತ್ಸೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎಂದರು.
ಅಭಿಯಾನವು ಜ.30 ರಿಂದ ಫೆ.13ರವರೆಗೆ ಜಾಗೃತಿ ಅಭಿಯಾನವು ಇರುತ್ತದೆ, ಜಾಗೃತಿ ಅಭಿಯಾನವು ಅರಿವು ಮೂಡಿಸುವುದು. ಎಲ್ಲರ ಜವಾಬ್ದಾರಿ. ಸಂಪೂರ್ಣವಾದ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗದಿಂದ ಪಡೆಯಬೇಕು, ಕುಷ್ಠರೋಗ ರೋಗಕ್ಕೆ ಚಿಕಿತ್ಸೆ ಊಂಟು ಯಾವುದೇ ತರಹದ ಭಯಬೇಡ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ ಕುಮಾರ, ಶಾಲೆಯ ಮುಖ್ಯ ಗುರುಗಳಾದ ಜಯಾ ಮೇಡಂ, ಎಲ್ಲಾ ಸಹ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.