×
Ad

ಯಾದಗಿರಿ | ಹಳ್ಳದಲ್ಲಿ ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತ್ಯು

Update: 2024-11-18 10:48 IST

ಯಾದಗಿರಿ: ಜಾನುವಾರುಗಳ ಮೇಯಿಸಲು ಹೋಗಿದ್ದ ವೇಳೆ ಹಳ್ಳಕ್ಕೆ ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಹಿರೇ ಹಳ್ಳ ಎಂಬಲ್ಲಿ ನಡೆದಿದೆ.

ದೇವತ್ಕಲ್ ಗ್ರಾಮದ ಶ್ರೇಯಣ್ಣ (8), ಯುವರಾಜ (9) ಮೃತಪಟ್ಟ ಬಾಲಕರು.

ಇವರಿಬ್ಬರು ರವಿವಾರ ಮಧ್ಯಾಹ್ನ ಹಳ್ಳದಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದರು. ಹಳ್ಳದ ದಂಡೆಯಲ್ಲಿ ಬಾಲಕರ ಬಟ್ಟೆಗಳು ಇರುವುದು ಕಂಡು ಕುಟುಂಬಸ್ಥರು ಹುಡುಕಾಟವನ್ನು ನಡೆಸಿ ನಂತರ ಪೊಲೀಸರಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ರಾತ್ರಿ ಡಿವೈಎಸ್ಪಿ ಜಾವಿದ್ ಇನಾಂದಾರ್, ಪೊಲೀಸ್ ಇನ್ ಸ್ಪೆಕ್ಟರ್ ಆನಂದ ವಾಗಮೋಡೆ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಸೋಮವಾರ ಬೆಳಗ್ಗೆಯಿಂದ ಮತ್ತೆ ಹುಡುಕಾಟ ಆರಂಭಿಸಿದ್ದು 9 ಗಂಟೆ ಸುಮಾರಿಗೆ ಇಬ್ಬರು ಬಾಲಕರ ಮೃತದೇಹಗಳು ಹಳ್ಳದಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News