ಯಾದಗಿರಿ | ಅರ್ಬನ್ ಕೋ ಆಪರೇಟಿವ್ ಸೊಸೈಟಿ ರಾಜಾ ಮುಕುಂದ ನಾಯಕ ಪ್ಯಾನಲ್ ಗೆಲುವು
ಸುರಪುರ : ಇಲ್ಲಿನ ಅರ್ಬನ್ ಕ್ರೆಡಿಟ್ ಕೋ-ಆಪ್ ಸೊಸೈಟಿಯ 2025-30ನೇ ಸಾಲಿನ ಅಂಗವಾಗಿ ಫೆ.2 ರಂದು ಪ್ರಭು ಮಹಾವಿದ್ಯಾಲಯದಲ್ಲಿ ನಡೆದ ಚುನಾವಣೆಯ ನಂತರ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 3 ಪ್ಯಾನಲ್ ಹಾಗೂ ಇನ್ನು ಕೆಲವರು ಏಕಾಂಗಿಯಾಗಿ ಚುನಾವಣೆಯ ಕಣದಲ್ಲಿದ್ದರು.
ಆದರೆ ಈ ಬಾರಿಯ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ ಗ್ರಾಮ ಪಂಚಾಯತ್ ಗೆ ಮೀರಿಸುವಂತೆ ಇತ್ತು. ಪ್ರತಿಷ್ಠೆಯ ಕಣವಾಗಿದ್ದ ಸುರಪುರ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಹಾಗೂ ರಾಜಾ ರಂಗಪ್ಪ ನಾಯಕ ಪ್ಯಾಪಲಿ ಅವರ ಪ್ಯಾನಲ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆಯಿತು.
9ಜನ ಸಾಮಾನ್ಯ ಅಭ್ಯರ್ಥಿಗಳು, ಎಸ್.ಟಿ 1 ಅಭ್ಯರ್ಥಿ, ಎಸ್.ಸಿ 1 ಅಭ್ಯರ್ಥಿ ಹಿಂದುಳಿದ ವರ್ಗ (ಅ) ಅಭ್ಯರ್ಥಿ 1, ಹಿಂದುಳಿದ ವರ್ಗ ( ಬ) ಅಭ್ಯರ್ಥಿ 1, ಮಹಿಳಾ ಅಭ್ಯರ್ಥಿಗಳು 2 ಸೇರಿ ಒಟ್ಟು 15 ಅಭ್ಯರ್ಥಿಗಳಾದ ನರಸಿಂಹಕಾಂತ ಚಂದ್ರಕಾಂತ ಪಂಚಮಗಿರಿ,
ನರೇಶಕುಮಾರ ರಮೇಶ್ಚಂದ್ರ ಜೈನ್,ಪ್ರಕಾಶ ರಾಜಶೇಖರಪ್ಪ ಸಜ್ಜನ, ಪಾರಪ್ಪ ಲಕ್ಷ್ಮಣ ಗುತ್ತೇದಾರ, ರಾಕೇಶ್ ತಿಪ್ಪಣ್ಣ ಹಂಚಾಟೆ, ರಾಜಾ ಮುಕುಂದ ನಾಯಕ ವಾಸುದೇವ ನಾಯಕ, ರಾಜಾ ರಾಮಪ್ಪ ನಾಯಕ ರಾಜಾ ಲಕ್ಷ್ಮಪ್ಪ ನಾಯಕ, ರಾಜಾ ವಿಜಯಕುಮಾರ ನಾಯಕ ರಾಜಾ ಮೌನೇಶ ನಾಯಕ, ಯಲ್ಲಪ್ಪ ಚಂದಪ್ಪ ಹುಲಕಲ್, ಖಾಜಾ ಖಲೀಲ್ ಅಹಮ್ಮದ್ ಯಾಸೀನಸಾಬ್ ಅರಕೇರಿ, ಶಿವರಾಜ ವೀರಪ್ಪ ಅವಂಟಿ ,ಚವ್ಹಾ ಲಕ್ಷ್ಮೀಪದ್ಮಾವತಿ ಸಿವಿಕೆಆರ್ ಆರ್.ರೆಡ್ಡಿ, ಛಾಯಾ ಮನೋಹರ ಕುಂಟೋಜಿಯವರು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಬಹುಮತದಿಂದ ಆಯ್ಕೆಯಾದರು.
ರಾಜಾ ಮುಕುಂದ ನಾಯಕ ಹಾಗೂ ರಾಜಾ ರಂಗಪ್ಪ ನಾಯಕ (ಪ್ಯಾಪ್ಲಿ) ಅವರ ಪ್ಯಾನಲ್ ಗೆಲುವು ಸಾಧಿಸುತ್ತಿದ್ದಂತೆಯೇ ಸಿಹಿ ಹಂಚಿ ಪಟಾಕಿ ಸಿಡಿಸಿ ನಿರ್ದೇಶಕರ ಅಭಿಮಾನಿಗಳು ಸಂಭ್ರಮಿಸಿದರು.