ಯಾದಗಿರಿ | ವೀರಶೈವ ಲಿಂಗಾಯತ ಸಮಾಜ ಇತರರಿಗೆ ಮಾದರಿಯಾಗಿದೆ : ಶಿವಮೂರ್ತಿ ಶಿವಾಚಾರ್ಯ
ಸುರಪುರ : ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜ ಇತರರಿಗೂ ಮಾದರಿ ಸಮಾಜವಾಗಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಚುನಾವಣೆಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ಇಂದು ತಾವೆಲ್ಲರು ಸಭೆ ಸೇರಿ ಸಮಾಜದ ಒಗ್ಗಟ್ಟಿಗಾಗಿ ಚುನಾವಣೆ ಪ್ರಕ್ರಿಯೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಲು ತಾವೆಲ್ಲರು ಮಠಾಧೀಶರ ಮಾರ್ಗದರ್ಶನದಲ್ಲಿ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಡೇಕಲ್ ದುರುದುಂಡೇಶ್ವರ ಮಠದ ಶಿವುಕುಮಾ ಸ್ವಾಮೀಜಿ, ಮುಖಂಡರಾದ ಬಸವರಾಜ ಜಮದ್ರಖಾನಿ, ನಾಗಣ್ಣ ಸಾಹುಕಾರ ದಂಡಿನ್, ಅಧ್ಯಕ್ಷ ಡಾ.ಸುರೇಶ ಸಜ್ಜನ್, ಹೆಚ್.ಸಿ.ಪಾಟೀಲ್, ಮಲ್ಲಿಕಾರ್ಜುನ ಸತ್ಯಂಪೇಟೆ, ಜಯಲಲಿತಾ ಪಾಟೀಲ್, ಸೂಗುರೇಶ ವಾರದ್, ಮಂಜುನಾಥ ಜಾಲಹಳ್ಳಿ,ರಾಜಶೇಖರಗೌಡ ವಜ್ಜಲ್, ಚಂದ್ರಶೇಖರಗೌಡ ಮಾಗನೂರ, ಬಾಪುಗೌಡ ಪಾಟೀಲ್, ಶಿವರಾಜಪ್ಪ ಗೋಲಗೇರಿ, ಸಿದ್ದನಗೌಡ ಹುಣಸಗಿ, ಸೋಮಶೇಖರ ಶಾಬಾದಿ ಸೇರಿದಂತೆ ಅನೇಕರು ಮಾತನಾಡಿದರು.
ಸಭೆಯ ವೇದಿಕೆಯಲ್ಲಿ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರುಕ್ಮಾಪುರ ಹಿರೇಮಠಧ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸ್ವಾಮೀಜಿ ಮುದನೂರ ಕಂಠಿ ಮಠದ ಶಾಂತಮಲ್ಲಿಕಾರ್ಜು ಸ್ವಾಮೀಜಿ, ದೇವಾಪುರದ ರವಿ ಮುತ್ಯಾ,ಕಿಟ್ಟಪ್ಪ ಸಾಹುಕಾರ, ಮಲ್ಲಣ್ಣ ಸಾಹುಕಾರ, ಸಂಗಣ್ಣ ಬೆಳ್ಳಿ, ಚನ್ನಯ್ಯಸ್ವಾಮಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಸಭೆಯ ಕುರಿತು ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಕಲಕೇರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.