×
Ad

ಯಾದಗಿರಿ | ವೇಮನ ಭಾರತ ಕಂಡ ಖ್ಯಾತ ಸಂತ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

Update: 2025-01-19 16:27 IST

ಯಾದಗಿರಿ : ಮಹಾಯೋಗಿ ವೇಮನ ಭಾರತ ಕಂಡ ಖ್ಯಾತ ಸಂತರು, ದಾರ್ಶನಿಕರೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಬಣ್ಣಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಮಹಾಯೊಗಿ ವೇಮನ ಜಯಂತ್ಸೋವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇಮನರು ತಾನು ಕಂಡ, ಅನುಭವಿಸಿದ ಸತ್ಯವನ್ನು ಆಡುಭಾಷೆಯಲ್ಲಿ ಸಣ್ಣ,ಸಣ್ಣ ಪದ್ಯಗಳ ಮೂಲಕ ಜನತೆಗೆ ತಿಳಿಸಿ, ಜಾಗೃತಿ ಮೂಡಿಸಿದ್ದರು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಯೂಡಾ ಅಧ್ಯಕ್ಷರಾದ ರವಿ ಮಾಲಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಮಠಪತಿ, ವಕಿಲರಾದ ಬವರಾಜ ಪಾಟೀಲ್ ಕ್ಯಾತನಾಳ, ರೆಡ್ಡಿ ಸಮಾಜದ ಉಪಾಧ್ಯಕ್ಷರಾದ ಶರಣಗೌಡ ಪೊಲೀಸ್ ಪಾಟೀಲ್ ಯಡ್ಡಳ್ಳಿ, ಸಾಹೆಬರೆಡ್ಡಿ ಬಿ ದೇಶಪಾಂಡೆ, ನಿಂಗಾರೆಡ್ಡಿ ಯಡ್ಡಳ್ಳಿ ಇದ್ದರು. ಡಾ.ಸಿದ್ದರಾಜರೆಡ್ಡಿ ಸ್ವಾಗತಿಸಿ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News