×
Ad

ಯಾದಗಿರಿ | ಸಾರ್ವಜನಿಕರಿಗೆ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅರಿವು ಕಾರ್ಯಕ್ರಮ

Update: 2025-02-07 19:40 IST

ಸೈದಾಪುರ : ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗ ಹೆಚ್ಚುತ್ತಿರುವಾಗ ಜನರಲ್ಲಿ ಭಯದ ಬದಲು ರೋಗದ ಬಗ್ಗೆ ಅರಿವು ಮುಖ್ಯ ಎಂದು ಕಡೇಚೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆಯಿಷ್ ತಕದೀಶ್ ಅಭಿಪ್ರಾಯಪಟ್ಟರು.

ಸಮೀಪದ ಕಡೇಚೂರು ಗ್ರಾಮ ಪಂಚಾಯತ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಸಿಡಿ ಸರ್ವೇಕ್ಷಣ ಘಟಕವತಿಯಿಂದ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಂಬಾಕು ಪದಾರ್ಥಗಳ ಹಾಗೂ ಮದ್ಯಪಾನ ಅತಿಯಾದ ಸೇವನೆಯಿಂದ ದೇಹದಲ್ಲಿ ಬದಲಾವಣೆ ಉಂಟಾಗಿ ಕ್ಯಾನ್ಸರ್ ರೋಗವು ಹುಟ್ಟಿಕೊಳ್ಳಲು ಪ್ರಮುಖ ಕಾರಣವಾಗಿದೆ. ಪುರುಷರಲ್ಲಿ ಬಾಯಿ, ಗಂಟಲು, ಶ್ವಾಸಕೋಶ, ಜಠರ, ಅನ್ನನಾಳದಲ್ಲಿ ಕಾಣಿಸಿಕೊಂಡರೆ, ಮಹಿಳೆಯರಲ್ಲಿ ಬಾಯಿ, ಸ್ತನ ಮತ್ತು ಗರ್ಭದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ರೋಗದ ಬಗ್ಗೆ ಜನರು ಭಯಪಟ್ಟುಕೊಳ್ಳದೆ ಅದನ್ನು ತಡೆಯಲು ವೈದ್ಯರ ಮಾರ್ಗದರ್ಶನದಂತೆ ತಪಾಸಣೆಯನ್ನು ಕೈಗೊಳ್ಳಬೇಕು. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದಲ್ಲಿ ಸೂಕ್ತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದು. ಇದರಿಂದ ರೋಗಿಯು ಬೇಗ ಗುಣಮುಖವಾಗಲು ಸಾದ್ಯವಾಗುತ್ತದೆ. 30 ವರ್ಷ ಮೇಲ್ಪಟ್ಟವರು ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಜೊತೆಗೆ ನಿತ್ಯ ನಾವು ಸೇವಿಸುವ ಆಹಾರ ಪದ್ಧತಿ, ವ್ಯಾಯಾಮ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ನಡೆಸಲು ಹೊಂದಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬನ್ನಪ್ಪ, ಎನ್ಸಿಡಿ ಆಪ್ತಸಮಾಲೋಚಕ ನಾಗೇಂದ್ರಪ್ಪ ಕುಂಬಾರ, ಸಿಎಚ್ಓ ರಾಘವಿ, ಪಿಎಚ್ಸಿಓ ಸುಭದ್ರ, ಅತೀಯಾ ಬೋಗಂ, ವಿಶಾಲ್, ಮರಿಲಿಂಗ, ಸರೋಜಾ, ಚೌಡಮ್ಮ, ರೂಪಾ ಹಾಗೂ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News