×
Ad

ಯಾದಗಿರಿ | ನಗರದ ವಿವಿಧ ಬಡಾವಣೆ ಯುವಕರು ಕರವೇಗೆ ಸೇರ್ಪಡೆ

Update: 2025-01-04 18:54 IST

ಯಾದಗಿರಿ : ನಗರದ ವಿವಿಧ ಬಡಾವಣೆಯ ಜಲ್ವಂತ ಸಮಸ್ಯೆಗಳು ಕಂಡು ಬಂದಾಗ ಹೋರಾಟ ರೂಪಿಸಲು ಮುಂದಾಗುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಸಲಹೆ ನೀಡಿದರು.

ಇಂದು ನರಗದ ಕರವೇ ಜಿಲ್ಲಾ ಕಾರ್ಯಲಯದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಎನ್.ಭೀಮುನಾಯಕ ನೇತೃತ್ವದಲ್ಲಿ ನಗರದ ಯುವಕರು, ಸ್ವಯಂ ಪ್ರೇರಿತವಾಗಿ ಕರವೇಗೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಅವರು, ಕರವೇ ಶಿಸ್ತು, ಸಂಯಮಕ್ಕೆ ಹೆಸರಾದ ಸಂಘಟನೆಯಾಗಿದ್ದು, ಯಾವುದೇ ಹೋರಾಟವನ್ನು ಹಮ್ಮಿಕೊಳ್ಳಬೇಕಾದರೆ ಶಿಸ್ತು ಬದ್ಧವಾಗಿ, ಮತ್ತು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂಧರ್ಭದಲ್ಲಿ ಕರವೇ ಯಾದಗಿರಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಭೀಮರಾಯ ರಾಮಸಮುದ್ರ, ಇತರರಿದ್ದರು.

ನೂತನವಾಗಿ ಸೇರ್ಪಡೆಗೊಂಡ ಯುವಕರು :

ಕೃಷ್ಣ ಮರಗಪ್ಪನೋರ್, ಮಣಿಕಂಠ ಪಸಪೂಲ್, ಬಸ್ಸು ತಳವಾರ, ರಾಮು ಮಾದ್ವಾರ, ಮಲ್ಲು ತೇಲಗರ್, ಸಾಬರೆಡ್ಡಿ ಪಸಪೂಲ್, ನಾಗರಾಜ ಮರಪ್ಪನೋರ್, ಪರುಶುರಾಮ ಮಳಪನೋರ್, ರವೀಂದ್ರ ಎಂ ಮುದ್ನಾಳ, ರೆಡ್ಡಿ ಗೋವಿಂದಪ್ಪನೋರ್, ವಿಶ್ವ ಕೇಂಚರ್, ವಿಶ್ವ ಅರಿಗೇರ, ಸುರೇಶ ಯಂಕ್ಷತಿ, ಸಿದ್ದು ಕಂಬಾರ, ವಿಶ್ವ, ಕಾರ್ತಿಕ, ಶಿವು ತಳವಾರ, ಕಾರ್ತಿಕ, ಇನ್ನೂ ಅನೇಕ ಯುವಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News