×
Ad

ಯಾದಗಿರಿ | ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಯುವ ಕಾರ್ಯಕರ್ತರಿಂದ ವಿಜಯೋತ್ಸವ

Update: 2025-02-08 17:30 IST

ಯಾದಗಿರಿ : ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಳಗೇರಾ ಗ್ರಾಮದಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಮಾಜಿ ಯುವ ಜಿಲ್ಲಾಧ್ಯಕ್ಷ ಮೌನೇಶ್ ಬೆಳಗೇರಾ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಕಮಲ ಅರಳಿದೆ, ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ, ದೆಹಲಿಯಲ್ಲಿ ವಿಜಯ ಸಾಧಿಸಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸದಾಶಿವರೆಡ್ಡಿ ಕೊಡ್ಲಾ, ಬೂತ್ ಅಧ್ಯಕ್ಷ ಸಾಬಣ್ಣ ಕೋಲಕುಂದಿ, ಸಾಬಣ್ಣ ಮಡಿವಾಳ, ಹಣಮಂತ ಕೋಲಕುಂದಿ, ಹಣಮಂತ ಎಲೇರಿ, ಶರಣಪ್ಪ ಬಳಿಚಕ್ರ, ಬಸಪ್ಪ ಚಟ್ಟೆರ, ಹಣಮಂತ ಬಸನಾಯ್ಕ, ಕಾಶಪ್ಪ ಬಸನಾಯ್ಕ, ಅನಿಲ್ ಕಡ್ಡೆರ್, ಹಣಮಂತ ಬಾವನೂರ್, ಚಂದಪ್ಪ ನಾಯ್ಕೋಡಿ, ದೇವಕೆಮ್ಮ ಕಂದರ್, ಭೀಮವ್ವ ಕೊಂಬೆನೂರ್, ಅಯ್ಯಪ್ಪ ನಾಟೆಕಾರ್, ಬೀರಪ್ಪ ಪೂಜಾರಿ, ಮಲ್ಲಿಕಾರ್ಜುನ್ ಮಾನೆಗಾರ್, ಬಾಲರೆಡ್ದಿ ಸಾಹುಕಾರ, ದಸ್ತಗಿರಿ, ಮರೆಪ್ಪ ಎಲ್ಝೇರಿ, ಸಿದ್ಧಲಿಂಗಪ್ಪ ಚಿಂತನಹಳ್ಳಿ, ಶರಣಪ್ಪ ತಂಬಾಕೇ, ಕಾಸಿಂ, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News