ಯಾದಗಿರಿ | ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,245 ಪ್ರಕರಣಗಳ ಇತ್ಯರ್ಥ
ಸುರಪುರ : ಇಲ್ಲಿಯ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.
ಮೂರು ಕಡೆಗಳಲ್ಲಿ ನಡೆದ ಅದಾಲತ್‌ನಲ್ಲಿ ಒಟ್ಟು 1,245 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ ಅವರು ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶರು ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಎರಡು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 3,193 ಪ್ರಕರಣಗಳನ್ನು ಕೈಗೊತ್ತಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು 19 ಸೇರಿದಂತೆ ಸಿವಿಲ್, ವಾಹನಗಳ ದಂಡದ ಪ್ರಕರಣಗಳು ಸೇರಿದಂತೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ ಅವರು 363 ಪ್ರಕರಣಗಳು, ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶರಾದ ಬಸವರಾಜ ಅವರು 416 ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಬಸವರಾಜ ಅವರು 466 ಪ್ರಕರಣಗಳು ಸೇರಿ ಒಟ್ಟು 1,245 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 1,78,36,252 ರೂ.ಗಳ ಪರಿಹಾರವನ್ನು ಕೊಡಿಸಲಾಗಿದೆ. ಇನ್ನೂ ಬ್ಯಾಂಕ್ ಸಾಲ ಮರು ಪಾವತಿಯ 19 ಪ್ರಕರಣಗಳಲ್ಲಿ 10.50 ಲಕ್ಷ ರೂ. ಗಳ ಮರು ಪಾವತಿ ಮಾಡಿಸಲಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಸುರೇಶ್ ಪಾಟೀಲ್, ಯಂಕೋಬ ದೇಸಾಯಿ ಅವರು ಹಾಗೂ ಅನೇಕ ಜನ ವಕೀಲರು ಭಾಗವಹಿಸಿದ್ದರು.