×
Ad

ಯಾದಗಿರಿ | ಪ.ಜಾ, ಪ.ಪಂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ನಗರದ ಬಡಾವಣೆಗೆ ಭೇಟಿ, ಸಮಸ್ಯೆಗಳ ಆಲಿಕೆ

Update: 2025-03-09 18:22 IST

ಯಾದಗಿರಿ : ನಿಮ್ಮ ಸಮಸ್ಯೆಗಳಿಗೆ ಹಂತ, ಹಂತವಾಗಿ ಪರಿಹಾರ ನೀಡಲಾಗುವುದು. ಸರ್ಕಾರ ಅನುದಾನ ಸೇರಿದಂತೆಯೇ ವಿವಿಧ ಯೋಜನೆಗಳು ಜಾರಿ ಮಾಡಿದೆ. ಅವುಗನ್ನು ಪಡೆದು ಆರ್ಥಿಕವಾಗಿ ಮುಂದೆ ಬನ್ನಿ, ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ ಎಂದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಭಾನುವಾರ ಇಲ್ಲಿನ ವಾರ್ಡ ನಂ. 5ರ ಬೋಳಿವಾಡದ ಮೇದಾರ ಬಡಾವಣೆಗೆ ಭೇಟಿ ನೀಡಿದ ವೇಳೆ ಅಲ್ಲಿ ಸೇರಿದ್ದ ಮೇದಾರ ಸಮುದಾಯದ ಜನರನ್ನು ಉದ್ದೇಶಿಸಿ, ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದಂತೆಯೇ ಪಲ್ಲವಿ ಅವರು ಅನೇಕ ವಿಷಯಗಳು ತಿಳಿಸಿದರು.

ಅಕ್ಕಪಕ್ಕದ ಬಡಾವಣೆಗಳು ನೋಡಿ , ಅಲ್ಲಿ ಎಷ್ಟು ಸ್ವಚ್ಛತೆ ಇದೆ. ಮೂಲಭೂತ ಸೌಲಭ್ಯಗಳು ಇವೆ. ಅವರ ಮಕ್ಕಳು ಶಾಲೆ ತೊರೆದಿಲ್ಲ, ಆದರೇ ನೀವು ಯಾವುದೇ ಸೌಲಭ್ಯಗಳಿಲ್ಲದೆ ಅದು ಹೇಗೆ ಜೀವನ‌ನಢಸುತ್ತಿದ್ದಿರಿ? ಮಕ್ಕಳನ್ನು ಶಾಲೆ ಬಿಡಿಸಿ‌ ನಿಮ್ಮ ಕುಲಕಸುಬಿ ಹಚ್ಚಿದ್ದಿರಿ. ಏಕೆ ಹೀಗೆ ಮಾಡಿದ್ದಿರಿ. ಈ ಸಂಬಂಧ ಇಲಾಖೆಗೆ ಹೋಗಿ ಅಲ್ಲಿ‌ ಅಧಿಕಾರಿಗಳಿಗೆ ಭೇಟಿ ನೀಡಿದರೇ ನಿಮ್ಮ ಸೌಲಭ್ಯಗಳು ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಇಂದು ನಮ್ಮ ಜೊತೆ ನಿಮ್ಮಬಳಿಗೆ ಬಂದಿದ್ದಾರೆ. ಅವರಿಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಹೇಳಿ ಮಾಡಿಕೊಡುತ್ತಾರೆ. ಅವರು ನಾನು ಅಭಿವೃದ್ಧಿ‌ವಿಷಯದಲ್ಲಿ‌ ತಾರತಮ್ಯ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ‌ ಚನ್ನಬಸಪ್ಪ ಸೇರಿದಂತೆಯೇ ಇತರರಿದ್ದರು. ಸಮಾಜದ ಮೂರು ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದರು. ರುದ್ರಭೂಮಿಗೆ ಜಾಗ ನೀಡಬೇಕು, ಸಮುದಾಯ ಭವನ ನಿರ್ಮಾಣವಾಗಬೇಕು ಮತ್ತು ಬಂಬು ಬಜಾರದ ವ್ಯವಸ್ಥೆ ಆಗಬೇಕೆಂದು ಸಮಾಜದ ಪ್ರಮುಖರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News