ಯಾದಗಿರಿ | ನಗರದ ಲುಂಬಿನಿ ಉದ್ಯಾನವನದಲ್ಲಿ ಬುದ್ಧನ ಮೂರ್ತಿ ಪ್ರತಿಷ್ಠಾಪನೆಗೆ ಅಂಬೇಡ್ಕರ್ ಸೇವಾ ಸಮಿತಿ ಮನವಿ
ಯಾದಗಿರಿ : ನಗರದಲ್ಲಿ ಲುಂಬಿನಿ ಉದ್ಯಾನವಿದ್ದು, ಕಳೆದ 10-11 ವರ್ಷಗಳದರೂ ಕೂಡಾ ಗೌತಮ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಅವರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಲುಂಬಿನಿ ಉದ್ಯಾನವನ ಹೆಸರಿಗೆ ಮಾತ್ರ ಲುಂಬಿನಿ ಉದ್ಯಾನವನವೆಂದು ಹೆಸರಿಟ್ಟಿದು, ಆದರೆ ಇಲ್ಲಿಯವರೆಗೂ ಗೌತಮ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಮಾಡಿಲ್ಲ. ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನ ಪ್ರತಿಷ್ಠಾಪನೆ ಮಾಡಬೇಕು ಹಾಗೂ ಉದ್ಯಾನವನದಲ್ಲಿ ಯಾವುದೇ ಸ್ವಚ್ಛತೆ ಮರಿಚಿಕೆಯಾಗಿದೆ ಉದ್ಯಾನವನ ಸರಿಯಾಗಿ ನಿರ್ವಹಣೆ ಇಲ್ಲ. ಲುಂಬಿನಿ ಉದ್ಯಾನವನನದೊಳಗೆ ಚರಂಡಿ ನೀರು ಬಂದು ಮೀನುಗಳು ಸತ್ತು ಹೋಗಿವೆ. ಸುಮಾರು ದಿನಗಳಿಂದ ಉದ್ಯಾನವನ ದುರ್ವಾಸನೆ ಬರುತ್ತಿದೆ. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಆದೊಷ್ಟು ಬೇಗ ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನ ಪ್ರತಿಷ್ಠಾಪನೆ ಮಾಡಿ, ಇಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಂಜನೇಯ ಭಂಡಾರಿ, ಸ ಸೈದಪ್ಪ ಕೂಲೂರ್, ಮೌನೇಶ್ ಗಿರಿಪ್ಪನೋರ್,ರಾಮು ಗಣಪುರ, ರಾಧಾಕೃಷ್ಣ ಕೌಳೂರ್, ಬಾಲು ಹಳ್ಳಿ ಉಪಸ್ಥಿತರಿದ್ದರು.