×
Ad

ಯಾದಗಿರಿ | ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸೂಚನೆ

Update: 2025-03-04 16:48 IST

ಯಾದಗಿರಿ : ನಿಗದಿತ ಅವಧಿಯಲ್ಲಿ‌ ಕಾಮಗಾರಿ‌ಗಳನ್ನು ಮುಗಿಸಬೇಕು ಮತ್ತು ಗುಣಮಟ್ಟದಲ್ಲಿ ನಡೆಸಬೇಕು. ಈ ಕಟ್ಟಡ ಬಹುಕಾಲ ಬಾಳಿಕೆ ಬರುವಂತೆಯೇ ನಿರ್ಮಿಸಿ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ರಾಮಸಮುದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ 2023-24ನೇ ಸಾಲಿನ ಆರ್ ಡಿಪಿಐ ಯೋಜನೆಯಡಿ ಸುಮಾರು 47.79 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹಳ್ಳಿಗಳ ರೈತಾಪಿ ವರ್ಗದ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕು. ಇಲಾಖೆ ವೈದ್ಯಕೀಯ ಸೌಲಭ್ಯವಿರುವ ವಾಹನಗಳೊಂದಿಗೆ ವೈದ್ಯರು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ರಾಜ್ಯ ಸರ್ಕಾರ ಕೃಷಿ ಮತ್ತು ಪಶು ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದರ ಉಪಯೋಗ ಮಾಡಿಕೊಳ್ಳಬೇಕು ಮತ್ತು ಅಧಿಕಾರಿಗಳು ಸಹ ಸೌಲಭ್ಯಗಳನ್ನು ಕಾಲ, ಕಾಲಕ್ಕೆ ಮುಟ್ಟಿಸಬೇಕೆಂದು ಶಾಸಕರು ಹೇಳಿದರು.

ಈ ವೇಳೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನಂದಮ್ಮ, ಹಿರಿಯ ಮುಖಂಡ ಡಾ.ಶರಣಭೂಪಾಲರಡ್ಡಿ ಪಾಟೀಲ್, ಇಲಾಖೆ ಅಧಿಕಾರಿ ಡಾ.ದೇಶಮುಖ್, ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ‌ ಬಿಳಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಈಟೆ, ದೇವೆಂದ್ರಪ್ಪ, ಹಣಮಂತ, ರಾಮು, ಸೇರಿದಂತೆಯೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News