×
Ad

ಯಾದಗಿರಿ | ಕಕ್ಕೇರಾ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕೀಟನಾಶಕ ಸಿಂಪಡಣಾ ಕಾರ್ಯಕ್ರಮ

Update: 2025-03-08 19:42 IST

ಸುರಪುರ: ತಾಲೂಕಿನ ಕಕ್ಕೆರಾ ಪ್ರಾ.ಆ.ಕೇಂದ್ರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ತಾಲೂಕು ಆರೋಗ್ಯಾಧಿಕಾರಿಗಳು ಸುರಪುರ ಮತ್ತು ಯಾದಗಿರಿ ಜಿಲ್ಲಾ NVBDCP  ತಂಡದಿಂದ IRS SPRAYING  (ಲ್ಯಾಂಬ್ಡ ಸೈಯಲೋತ್ರೀನ್ ಶೇ.10) ಒಳಾಂಗಣ ಕೀಟನಾಶಕ ಸಿಂಪರಣಾ ಕಾರ್ಯಕ್ರಮವನ್ನು ಮಾಡಲಾಯಿತು.

ಕಕ್ಕೇರಾ ಪ್ರಾ.ಆ.ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 10,225 ಮನೆಗಳಿಗೆ ಮತ್ತು  ರಾಜನಕೊಳ್ಳೂರು ವ್ಯಾಪ್ತಿಯಲ್ಲಿ 5,596 ಮನೆಗಳಿಗೆ ಒಳಾಂಗಣ ಕೀಟನಾಶಕ ಸಿಂಪರಣೆ ಮಾಡಿಸುವ ಗುರಿಯನ್ನು ನೀಡಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಜನರ ಸೌಲಭ್ಯಕ್ಕಾಗಿ ಸೊಳ್ಳೆಪರದೆಗಳನ್ನು ಸರ್ಕಾರದಿಂದ ಒದಗಿಸುವ ಕಾರ್ಯವನ್ನು ನಡೆಸಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ರಾಜಾ ವೆಂಕಪ್ಪನಾಯಕರವರು ತಿಳಿಸಿದ್ದಾರೆ. 

ಹಿ.ಆ.ನಿರೀಕ್ಷಣಾಧಿಕಾರಿಗಳಾದ ಹೀರಾಲಾಲ್ ಚವ್ಹಾಣ, ಜಯಾ ಪವಾರ್, ಶ್ರೀಮಂತ್, ತಾಲೂಕು ವಿಬಿಡಿ ಮೇಲ್ವಿಚಾರಕರಾದ ನರಸಿಂಹ ನಾಯಕ, ಎಪಿಡೊಮೊಲೊಜಿಸ್ಟ್ ಆಕಾಶ್ ಕಾಂಬಲೆ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News