×
Ad

ಯಾದಗಿರಿ | ಕುಂಬಾರಪೇಟ ಪೊಲೀಸ್ ಇಲಾಖೆಯಿಂದ ಎಸ್‌ಸಿ, ಎಸ್‌ಟಿ ಕುಂದು ಕೊರತೆಗಳ ಸಭೆ

Update: 2025-03-22 20:01 IST

ಸುರಪುರ : ನಗರದ ಕುಂಬಾರಪೇಟದ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸುರಪುರ ಠಾಣೆಯ ಪೊಲೀಸ್ ಇನ್‌ಸ್ಪ ಕ್ಟರ್ ಆನಂದ ವಾಗಮೊಡೆ ಮಾತನಾಡಿ, ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಜನರು ಸರಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಮತ್ತು ಯಾರಾದರೂ ಜಾತಿ ನಿಂದನೆ ಅಂತಹ ಯಾವುದೇ ರೀತಿಯ ಘಟನೆಗಳು ನಡೆದಲ್ಲಿ ನಮಗೆ ದೂರನ್ನು ಸಲ್ಲಿಸಬಹುದು, ಸದಾ ಕಾಲ ಪೊಲೀಸ್ ಇಲಾಖೆ ನಿಮ್ಮ ಜೊತೆಯಲ್ಲಿ ಇರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ನಮ್ಮ ಏರಿಯಾಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸ್ ಠಾಣೆಗೆ ಯಾರಾದರೂ ದೂರುಗಳನ್ನು ತೆಗೆದುಕೊಂಡು ಬಂದಲ್ಲಿ, ಪೊಲೀಸರು ತಕ್ಷಣಕ್ಕೆ ದೂರು ದಾಖಲೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಿಎಸ್ಐ ಶರಣಪ್ಪ ಹವಾಲ್ದಾರ್ ಹಾಗೂ ಮುಖಂಡರಾದ ಮಾನಪ್ಪ ಗುಡ್ಡ ಕಾಯಿ ವೆಂಕಟೇಶ ಗುಡ್ಡಕಾಯಿ,ಮರಿಯಪ್ಪ ಗುಡ್ಡಕಾಯಿ, ಹಣಮಂತ ಭದ್ರಾವತಿ, ಭೀಮಣ್ಣ ಸಂತ್ವಾರ, ರಘುವೀರ ಹರಪನಹಳ್ಳಿ, ಸಿದ್ದಪ್ಪ ಗುಡ್ಡಕಾಯಿ ,ಗೋವಿಂದ ನಾಯಕ ಟನಕೆದಾರ, ಕೃಷ್ಣಾ ಗುಡ್ಡಕಾಯಿ, ವೆಂಕಟೇಶ ಹರಪನಹಳ್ಳಿ, ಭೀಮಣ್ಣ ಗುಡ್ಡಕಾಯಿ, ಚಂದ್ರಶೇಖರ, ಹಣಮಂತ ಚಲವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News