×
Ad

ಯಾದಗಿರಿ | ಕಲಬುರಗಿ ಸುರಕ್ಷಾ ಹೆರಿಗೆ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2025-03-12 20:04 IST

ಸುರಪುರ : ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದ ಮಹಿಳೆ ಹೆರಿಗೆ ನಂತರ ರಕ್ತಸ್ರಾವವಾಗಿ ಮೃತಪಟ್ಟಿದ್ದು ನಿರ್ಲಕ್ಷ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾದಿಗ ಯುವ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ನಂದಕುಮಾರ್ ಕನ್ನೆಳ್ಳಿ ಆರೋಪಿಸಿದ್ದಾರೆ.

ನಗರದ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಮಾ.2ನೇ ತಾರೀಕು ಕಲಬುರಗಿಯ ಸುರಕ್ಷಾ ಹೆರಿಗೆ ಆಸ್ಪತ್ರೆಗೆ ಜ್ಯೋತಿ ಪರಶುರಾಮ್ ಎಂಬುವ ಮಹಿಳೆ ಹೆರಿಗೆಗೆ ದಾಖಲಾಗಿದ್ದು, ಹೆರಿಗೆ ನಂತರ ಮಾ. 5ರಂದು ರಕ್ತಸ್ರಾವ ಆಗುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ನಿರ್ಲಕ್ಷ್ಯ ತೋರಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಬಸವರಾಜ ಸೂಗೂರ, ಪ್ರಚಾರ ಸಮಿತಿ ಅಧ್ಯಕ್ಷ ಬಸವರಾಜ ಮುಷ್ಠಳ್ಳಿ, ಜೆಡಿಎಸ್ ಮುಖಂಡ ಶ್ರವಣಕುಮಾರ ನಾಯಕ,ಹುಲುಗಪ್ಪ ಶೆಳ್ಳಗಿ, ರಮೇಶ ಕಟ್ಟಿಮನಿ,ರಾಮು ಓಕಳಿ, ಬಲಭೀಮ ದೊಡ್ಡಮನಿ, ಪ್ರಭು ಕಟ್ಟಿಮನಿ, ಭೀಮರಾಯ ಓಕಳಿ, ಮೌನೇಶ ಮಂಗಿಹಾಳ, ಮಹೇಶ ಜಾಲಿಬೆಂಚಿ, ಮಾನಪ್ಪ ಕಟ್ಟಿಮನಿ, ಭೀಮಣ್ಣ ತಳ್ಳಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News