×
Ad

ಯಾದಗಿರಿ | ದೈಹಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯ; ಮರೆಪ್ಪ ಚಟ್ಟೇರಕರ್

Update: 2025-03-10 20:20 IST

ಯಾದಗಿರಿ: ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯವಾಗಿದೆ. ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ಮಾನಸಿಕವಾಗಿ ಶಕ್ತರಾಗುತ್ತೇವೆ ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಯ ಜಯಂತೋತ್ಸವ ಅಂಗವಾಗಿ ಆಯೋಜಿಸಿದ ಪಿಸಿಸಿ ಕ್ಲಬ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು, ಸದೃಢ ದೇಹ ಮತ್ತು ಸದೃಢ ಮನಸ್ಸು ಇರಬೇಕಾದರೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ದೈಹಿಕ ಶ್ರಮದಿಂದ ಮಾತ್ರ ಉತ್ತಮ ಆರೋಗ್ಯವಂತರಾಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಈ ಸಾಹಿತಿಗಳಾದ ಗಾಳೆಪ್ಪ ಪೂಜಾರಿ, ಡಾ.ಭಗವಂತ, ಮಹೇಶ್ ಕುರಕುಂಬಳಕರ್, ಪ್ರಶಾಂತ ಸುಂಗಲಕರ್, ಸೈದಪ್ಪ ಕೂಲ್ಲೂರ, ಮಲ್ಲಿಕಾರ್ಜುನ ಈಟೇ, ಪರಶುರಾಮ ಒಡೆಯರ್, ಶ್ರೀಮಂತ ಚಿನ್ನಾಕರ್, ಗಾಲಿದ್ ಪಟೇಲ್, ಬಸವರಾಜ್ ನಿಲ್ಲಹಳ್ಳಿ, ದೀಪಕ್ ಒಡೆಯರ್, ವಿಜಯ ದಾಸನಕೇರಿ, ಭೀಮರಾಯ ಹೊಸಮನಿ, ನಿಂಗಣ್ಣ ಬೀರನಾಳ, ಮಹೇಂದ್ರ ಕುರಕುಂಬಳಕರ್, ಭಿಮಣ್ಣ ಸುಂಗಲಕರ್, (ಡ್ಯಾನಿ) ಮರಿಲಿಂಗ ಕುರಕುಂಬಳಕರ್, ಸಂಪತ್ ಸುಂಗಲಕರ್, ಮಲ್ಲಿಕಾರ್ಜುನ ಬೊಮ್ಮನ್, ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News