×
Ad

ಯಾದಗಿರಿ | ಮಾ.11ರಂದು ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ ; ಮಹೇಶಗೌಡ ಸುಭೇದಾರ

Update: 2025-03-09 18:14 IST

ಯಾದಗಿರಿ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಶಹಾಪುರದ ಆರಬೋಳ ಕಲ್ಯಾಣ ಮಂಟಪದಲ್ಲಿ ಮಾ.11ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ, ರೈತ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಕಾರ್ಯಾಧ್ಯಕ್ಷ ಮಹೇಶಗೌಡ ಸುಭೇದಾರ ಶಹಾಪುರ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ‌ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಗಳಗೋಡ- ಜಿಡಗಾ, ಕೂಡಲ ಸಂಗಮ, ಹೆಡಗಿಮದ್ರಾ, ಸೊಂತ, ಹುಲಿಜಂತಿ, ಅಥಣಿ ಸೇರಿದಂತೆಯೇ ವಿವಿಧ ಮಠಾಧಿಶರು ವಹಿಸಲಿದ್ದಾರೆಂದರು.

ಸಮಾವೇಶವನ್ನು ಸಂಘಟನೆಯ ರಾಜ್ಯ ವರಿಷ್ಠ ಮೈಸೂರಿನ ಪಚ್ಚೆ ನಂಜುಡಸ್ವಾಮಿ ಉದ್ಘಾಟಿಸಲಿದ್ದಾರೆ. ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅಧ್ಯಕ್ಷತೆ ವಹಿಲಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಸೇರಿದಂತೆಯೇ ರಾಜ್ಯದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ದೀಪ ಬೆಳಗಿಸುವರು.

ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಮಟ್ಟೆಣ್ಣನವರ ಸೇರಿದಂತೆಯೇ ಇತರರು ನೆಗಿಲ ಪೂಜೆ ಮಾಡುವವರು. ಹೆಚ್ಚುವರಿ ಡಿಸಿ ಶರಣಬಸಪ್ಪ ಕೊಟಪ್ಪಗೋಳ್ ಸೇರಿದಂತೆಯೇ ಇತರರು ಗೋಮಾತೆಗೆ ಪೂಜೆ ಸಲ್ಲಿಸುವರೆಂದು ಮಹೇಶ ಸುಬೇದಾರ ಹೇಳಿದರು.

ಸುಮಾರು 25ಕ್ಕೂ ಹೆಚ್ಚು ಸಾಧಕರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಕ ಅಧ್ಯಕ್ಷ ದೇವಿಂದ್ರಗೌಡ ಪೊಲೀಸ್ ಪಾಟೀಲ್ ಮಾಲಗತ್ತಿ, ಗೌರವಾಧ್ಯಕ್ಷ ಮಹೇಶ ಸಾಹುಕಾರ ಆನೇಗುಂದಿ ಸೇರಿದಂತೆಯೇ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News