×
Ad

ಯಾದಗಿರಿ | ಅನಧಿಕೃತ ವಸತಿ ಶಾಲೆಗಳು, ಬೇಸಿಗೆ ತರಬೇತಿ ಶಿಬಿರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ; ಸಿದ್ದು ಪಟ್ಟೇದಾರ

Update: 2025-03-13 16:37 IST

ಶಹಾಪುರ : ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ಹಲವು ಬೇಸಿಗೆ ತರಬೇತಿ ಶಿಬಿರಗಳು ಪಠ್ಯಕ್ರಮಕ್ಕೆ ಅನುಗುಣವಾಗಿ, ವಿಶೇಷವಾಗಿ 5ನೇ ತರಗತಿ ವಿದ್ಯಾರ್ಥಿಗಳಿಗೆ ನವೋದಯ, ಸೈನಿಕ, ಕಿತ್ತೂರ, ಆದರ್ಶ ವಿಶೇಷ ತರಬೇತಿ ಹೆಸರಿನಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಪ್ರಾರಂಭಿಸಿ, ಪ್ರವೇಶ ಪಡೆದು ಅಕ್ರಮ ಹಣ ಸಂಪಾದಿಸುತ್ತಿರುವ ಅನಧೀಕೃತ ವಸತಿ ಶಾಲೆಗಳು ಹಾಗೂ ಬೇಸಿಗೆ ತರಬೇತಿ ಶಿಬಿರಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಶಹಾಪುರ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು

ಕಾನೂನು ರೀತಿಯಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಸತಿ ಶಾಲೆ ತೆರೆಯುವಂತಿಲ್ಲ, ಆದರೆ, ಶಹಾಪುರ ನಗರ ಹಾಗೂ ತಾಲೂಕಿನಾದ್ಯಂತ ಕಾನೂನುಬಾಹಿರವಾಗಿ ಅಕ್ರಮವಾಗಿ ಅನಧಿಕೃತ ವಸತಿ ಶಾಲೆಗಳು ತೆಗೆದು ವಸತಿ ಸಹಿತ ಮತ್ತು ವಸತಿ ರಹಿತ ಎಂದು ಬ್ಯಾನರ್, ಪೋಸ್ಟರ್ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿ, ಕರಪತ್ರ ವಿತರಿಸಿ ಪಾಲಕರ ದಾರಿ ತಪ್ಪಿಸುತ್ತಿದ್ದಾರೆ.

ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಆರಂಭವಾಗುತ್ತಿದ್ದು, ಹೆಚ್ಚು ಬೇಸಿಗೆ ತರಬೇತಿ ಶಿಬಿರಗಳು ತಲೆ ಎತ್ತಲು ಪ್ರಾರಂಭಿಸುತ್ತಿವೆ. ಈ ಮುಖಾಂತರ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಈ ಎಲ್ಲ ಸೆಂಟರ್‌ಗಳ ಮೇಲೆ ಕೂಡಲೇ ದಾಳಿ ನಡೆಸಿ, ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವಿಷಯದ ಕುರಿತು 2024-2025ನೇ ಸಾಲಿನಲ್ಲಿ ನಮ್ಮ ಸಂಘಟನೆ ವತಿಯಿಂದ ನಿರಂತರ ಹೋರಾಟ ಮಾಡುತ್ತಾ ಬಂದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾಟಾಚಾರಕ್ಕೆ ನೋಟೀಸ್ ನೀಡುವುದನ್ನು ಬಿಟ್ಟರೆ ಯಾವುದೇ ಪ್ರಯೋಜನವಾಗಿರುವುದಿಲ್ಲ ಯಾವ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಕೇವಲ ಕಾಗದ ಪತ್ರದಲ್ಲಿ ಮಾತ್ರ ಚಟುವಟಿಕೆಗಳನ್ನು ಕೈಗೊಂಡು ಖಾಸಗಿ ವಸತಿ ಶಾಲೆಗಳ ಪರವಾಗಿ ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದಾರೆ ಎನ್ನುವ ಅನುಮಾನ ಹುಟ್ಟಿವೆ ಎಂದರು.

ಬೇಸಿಗೆ ತರಬೇತಿ ಶಿಬಿರಗಳು ಹಾಗೂ ಅನಧೀಕೃತ ವಸತಿ ಶಾಲೆಗಳನ್ನು ನಡೆಸುತ್ತಿರುವವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು, ಶಾಲಾ ಪರವಾನಿಗೆಯನ್ನು ರದ್ದುಪಡಿಸಿ, ಕ್ರಿಮಿನಲ್ ಪ್ರಕರಣದ ದಾಖಲಿಸಬೇಕೆಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News