×
Ad

ಯಾದಗಿರಿ | ಗುರು ಎಂಬ ಪದ ಅತ್ಯಮೂಲ್ಯ ವಾದದ್ದು : ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್

Update: 2025-03-08 23:05 IST

ಕೆಂಭಾವಿ : ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರೊಂದಿಗೆ ಗುರುಹಿರಿಯರಿಗೆ ತಂದೆ ತಾಯಂದಿರಿಗೆ, ಗೌರವವನ್ನು ಕೊಡುವುದನ್ನು ಕಲಿಸುವುದರ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸುವ ದೊಡ್ಡ ಜವಬ್ದಾರಿ ಶಿಕ್ಷಕರಿಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಯಲ್ಲಪ್ಪ ಕಾಡ್ಲೂರ್ ಹೇಳಿದರು.

ಪಟ್ಟಣದ ಹೆಸರಾಂತ ಶಾಲೆಗಳಲ್ಲಿ ಒಂದಾದ ವಿಧ್ಯಾಲಕ್ಷ್ಮೀ ಪಬ್ಲಿಕ್ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪೂಜ್ಯ ಷ.ಬ್ರ ಚನ್ನಬಸವ ಶಿವಚಾರ್ಯರ ನೇತೃತ್ವದಲ್ಲಿ ಪುರಸಭೆ ಅಧ್ಯಕ್ಷ ರಹಿಮಾನ ಪಟೇಲ್‌ ಯಲಗೋಡ್ ಮತ್ತು ಅತಿಥಿಗಳು ಜೊತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇನ್ನೂ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ,  ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಭವ್ಯಭಾರತದ ಭವಿಷ್ಯ ಭದ್ರವಾಗಿ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಕೊಂಡಿದ್ದ ಷ.ಬ್ರ ಚನ್ನಬಸವ ಶಿವಚಾರ್ಯರು, ಮಕ್ಕಳಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಭಾರತಿ ಮತ್ತು ಜಮುಕು ನೆರವೇರಿಸಿದರು. ಸ್ವಾಗತವನ್ನು ಪ್ರಜ್ಞಾ ಮತ್ತು ಸುಮೈಯಾ ಕೊರಿದರು. ವಂದನಾರ್ಪಣೆಯನ್ನು ಸಮರಿನ ಪಟೇಲಿ ಮಾಡಿದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಾಲೆಯ ವಿಧ್ಯಾರ್ಥಿಗಳಾದ ಭಾರತಿ .ಎಮ್. ಆಲೂರ ಹಾಗೂ ಜಂಪ್ಪಾ ನೆರವೇರಿಸಿದರು. ವಂದನಾರ್ಪಣೆಯನ್ನು ಸಮ್ರೀನ್ ಪಟೇಲ್ ಮಾಡಿದರು.

ಈ ಸಂದರ್ಭದಲ್ಲಿ ಶಿವಪುತ್ರಪ್ಪ ಅಲ್ಪಾಳ ಇ ಸಿಓ ಕೆಂಭಾವಿ ವಲಯ ಸುರಪುರ, ಎಂ ಬಿ ಪಾಟೀಲ್ ಮುಖ್ಯಗುರುಗಳು ಸ. ಬಾಲಕಿಯರ ಪ್ರೌಢ ಕೆಂಭಾವಿ, ಬಂದೇನವಾಜ್ ನಾಲತವಾಡ ಸಿ ಆರ್ ಪಿ ಕೆಂಭಾವಿ, ಶ್ರೀಶೈಲ್ ಪಾಸೋಡಿ ಸಿ ಆರ್ ಪಿ ನಗನೂರ, ಎಸ್. ರಾಮು ಕಾರ್ಯದರ್ಶಿಗಳು ನವೋದಯ ಶಿಕ್ಷಣ ಸಂಸ್ಥೆ ಕೆ , ಎಸ್ ನಾಗಮಣಿ ಮುಖ್ಯೋಪಾದ್ಯಾಯನಿ ಪ್ರಾಥಮಿಕ ವಿಭಾಗ ವಿದ್ಯಾಲಕ್ಷ್ಮಿ ಪಬ್ಲಿಕ ಶಾಲೆ ಶ್ರೀ ಬಿ ಎಸ್ ಪಟೇಲ ಮುಖ್ಯಗುರುಗಳು ವಿದ್ಯಾಲಕ್ಷ್ಮಿ ಪ್ರೌಢ ಶಾಲೆ , ಶಿವಪ್ಪ ಕಂಬಾರ ಸೇರಿದಂತೆ ಶಾಲೆಯ ಶಿಕ್ಷಕರು , ಆಡಳಿತ ಮಂಡಳಿ , ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.ಬಾಕ್ಸ.

ಬಿಳ್ಕೋಡುವ ಸಮಾರಂಭದ ಹಿನ್ನಲೆಯಲ್ಲಿ ಶಾಲಾ ವಿಧ್ಯಾಲಕ್ಷ್ಮೀ ಪಬ್ಲಿಕ್ ಶಾಲೆಯ ಮಕ್ಕಳಿಂದ ಏರ್ಪಡಿಸಿದ್ದ ವಸ್ತು ಪ್ರದರ್ಶನ ಸಮ್ಮೇಳನವನ್ನು ವಿಕ್ಷೀಸಿದ ಅತಿಥಿಗಳು ಹಾಗೂ ಗಣ್ಯರು ಮತ್ತು ಪೋಷಕರು ಪ್ರಶಂಸೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News