ಯಾದಗಿರಿ | ನಗರದ ಘನ ತ್ಯಾಜ್ಯವನ್ನು ಹಾಕದಂತೆ ಒತ್ತಾಯಿಸಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ
ಯಾದಗಿರಿ : ನಗರದ ಘನ ತ್ಯಾಜ್ಯ (ಅಂದರೆ) ಚರಂಡಿಯಿಂದ ತೆಗೆದ ಹೊಲಸನ್ನು ಬಬಲಾದ & ಬೀರನಾಳ ಗ್ರಾಮಗಳಿಗೆ ಕೇವಲ 1 ಕಿ.ಮೀ ಅಂತರದಲ್ಲಿ ಇರುವ ಯಾದಗಿರಿ ನಗರದ ಕಸ ಮತ್ತು ವಿಲೇವಾರಿ ಘಟಕಕ್ಕೆ ತಂದು ಹಾಕುವುದರಿಂದ ದುರ್ವಾಸನೆ ಬೀರುತ್ತಿದೆ ಇದನ್ನು ಕೂಡಲೇ ನಿಲ್ಲಿಸಿ ಬಬಲಾದ ಮತ್ತು ಬೀರನಾಳ ಗ್ರಾಮದ ಜನರ ಈ ನರಕದಿಂದ ತಪ್ಪಿಸಿ ಎಂದು ಒತ್ತಾಯಿಸಿ ರಸ್ತೆ ತಡೆದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಇಲ್ಲಿ ನಾಯಿಗಳ ದಾಳಿಗಳಿಂದ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿರುವ ಬಬಲಾದ ಮತ್ತು ಬೀರನಾಳ ಗ್ರಾಮದ ಸಾರ್ವಜನಿಕರಿಗೆ ಮತ್ತೊಂದು ಆಘಾತ ಸುದ್ದಿ ಬಂದಿದೆ. ಬೀದರ್ ಮತ್ತು ಕಲಬುರಗಿ ಮೆಡಿಕಲ್ ವೆಸ್ಟನ್ನು ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಸುಮಾರು ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಯಾದಗಿರಿ ನಗರದ ನಗರಸಭೆಯ ಹೊಲಸು ಘನ ತ್ಯಾಜ್ಯ ವಸ್ತುಗಳನ್ನು ಬಬಲಾದ ಗ್ರಾಮದಿಂದ 1 ಕಿಮೀ ಅಂತರದಲ್ಲಿ ಜಮಾ ಮಾಡುವುದರಿಂದ ಮಳೆಗಾಲದಲ್ಲಿ ನೂರಾರು ಬೀದಿ ನಾಯಿಗಳು ಈ ಹೊಲಸನ್ನು ತಿನ್ನಲ್ಲು ಬಂದು ಅಲ್ಲಿ ಜಮಾವಾಗಿ ಜನರ ಮೇಲೆ ದಾಳಿ ಮಾಡುತ್ತವೆ ಆದರೆ ಯಾದಗಿರಿ ಮತ್ತು ವಡಗೇರಾದಿಂದ ಬಬಲಾದ ಸಂಪರ್ಕ ಹೋಗುವ ರಸ್ತೆ ಒಂದೇ ಇರುವುದರಿಂದ ಅನಿವಾರ್ಯವಾಗಿ ಅದೇ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಸಂಗ್ರಹಿಸುವ ಮುಂಭಾಗದಿಂದಲೇ ನಡೆದಾಡಬೇಕಾಗುತ್ತದೆ.
ದಾರಿ ಹೋಕರಿಗೆ ಮತ್ತು ಸ್ವಂತ ಮೋಟಾರ್ ಮೇಲೆ ಹೋಗುವ ಅಲ್ಲಿನ ಜನರಿಗೆ ನೂರಾರು ನಾಯಿಗಳು ಸುಮಾರು ದಿನಗಳಿಂದಲೂ ಸಾರ್ವಜನಿಕರ ಮೇಲೆ ದಾಳಿ ಮಾಡಿವೆ. ಜನರು ಭಯಭೀತರಾಗಿ ನಾಯಿ ದಾಳಿಗೆ ಒಳಗಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಆಘಾತ ವಿಷಯವೆಂದರೆ ಬೀದರ್ ಮತ್ತು ಕಲಬುರಗಿ ಈ 2 ಜಿಲ್ಲೆಗಳ ಮೆಡಿಕಲ್ ವೆಸ್ಟನ್ನು ಬಬಲಾದ ಗ್ರಾಮದಲ್ಲಿಯ ಘನ ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ತಂದು ಹಾಕುವುದರಿಂದ ಮತ್ತೆ ಬಬಲಾದ ಮತ್ತು ಬೀರನಾಳ ಗ್ರಾಮಗಳ ಸಾರ್ವಜನಿಕರಿಗೆ ಕೆಟ್ಟ ದುರ್ವಾಸನೆ ತಡೆಯಲಾರದಂತ ಸ್ಥಿತಿ ಉಂಟಾಗಿದೆ. ಇಡೀ ಬಬಲಾದ ಮತ್ತು ಬೀರನಾಳ ಗ್ರಾಮಗಳ ಸಾರ್ವಜನಿಕರಿಗೆ ನರಕಯಾತನೆಯಾದಂತಾಗಿದೆ ಎಂದು ದೂರಿದರು.
ಜಿಲ್ಲಾಡಳಿತ ಮತ್ತು ಸರಕಾರ ಎಚ್ಚರಗೊಂಡು ಘನ ತ್ಯಾಜ್ಯ ವಸ್ತು ಸಂಗ್ರಹ ಹೊಲಸನ್ನು ಅರಣ್ಯ ಇಲಾಖೆ ಇರುವ ಯಾದಗಿರಿಯ ಹತ್ತಿರದಲ್ಲಿರುವ ಗುಡ್ಡದಲ್ಲಿ ಜಮಾ ಮಾಡಿ, ದುರ್ವಾಸನೆಯಿಂದ ಮತ್ತು ನೂರಾರು ಬೀದಿ ನಾಯಿಗಳ ಹಾವಳಿಯಿಂದ ತಪ್ಪಿಸಿ, ಇಲ್ಲವಾದರೆ ಬಬಲಾದ ಗ್ರಾಮವನ್ನೇ ಬೇರೆ ಕಡೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ, ಅರಣ್ಯ ಭೂಮಿ ಇದ್ದರೂ ಕೂಡಾ ದುರುದ್ದೇಶದಿಂದ ಬಬಲಾದ ಮತ್ತು ಬೀರನಾಳ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಗರಸಭೆಯವರು ನಿರ್ಮಿಸಿದ್ದಾರೆ. ಈ ವಿಲೇವಾರಿ ಘಟಕ ಅವೈಜ್ಞಾನಿಕವಾಗಿದ್ದು, ಈ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಜಿಲ್ಲಾಡಳಿತ ಕಚೇರಿಗಳು ವಡಗೇರಾ ಕ್ರಾಸ್‌ನಲ್ಲಿ ಸರ್ಕಾರಿ ಭೂಮಿ ಇದ್ದರೂ, ಇಲ್ಲಿ ಯಾವುದೇ ಕಚೇರಿ ನಿರ್ಮಾಣ ಮಾಡದೇ, ಈ ಹೊಲಸು ಘನ ತ್ಯಾಜ್ಯ ಘಟಕ ನಿರ್ಮಿಸಿದ್ದು ಎಷ್ಟರ ಮಟ್ಟಿಗೆ ಸರಿಯಾಗಿದೆ ? ಎಂದು ಪ್ರಶ್ನಿಸಿದರು.
ನಾವು ರಸ್ತೆ ತಡೆ ಪ್ರತಿಭಟನೆ ಮಾಡುತ್ತಿದ್ದರೂ, ಜಿಲ್ಲಾಡಳಿತದಿಂದ ಇದಕ್ಕೂ ವಿಳಂಭವಾದರೆ ಇದೇ ಮಾ.25 ರಂದು ಯಾದಗಿರಿ ನಗರವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಜಿಲ್ಲಾಡಳಿತಕ್ಕೆ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡಿದರು.