×
Ad

ಯಾದಗಿರಿ | ಎ.27 ರಂದು 3ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭ

Update: 2025-04-25 19:55 IST

ಸುರಪುರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ 134ನೇ ಜಯಂತ್ಯೊತ್ಸವ ಅಂಗವಾಗಿ ಸತೀಶ್‌ ಜಾರಕಿಹೊಳಿ ಅಭಿಮಾನಿಗಳ ಬಳಗದ ವತಿಯಿಂದ ಎ.27 ರಂದು 3ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ವೇದಿಕೆಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ವಾಗಣಗೇರಾ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭದ ಆಮಂತ್ರಣ ಪತ್ರಿಕೆ, ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಎ.27 ರಂದು ಮದ್ಯಾಹ್ನ 12.30ಕ್ಕೆ ನಗರದ ವಾಗಣಗೇರಾ ರಸ್ತೆಯಲ್ಲಿರುವ ಕುಂಬಾರಪೇಟನ ಎನ್.ಯು.ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿದ್ದು, ಬೌದ್ಧ ಧರ್ಮದ ಪ್ರಕಾರ 18 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

ಬೀದರ್‌ನ ನೌಪಾಲ ಬಂಥೇಜಿ ಸಾನಿಧ್ಯ ವಹಿಸಲಿದ್ದು, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಉದ್ಘಾಟಿಸುವರು. ಸಚಿವ ಶರಣಬಸಪ್ಪ ದರ್ಶನಾಪುರ ಪುಷ್ಪಾರ್ಚನೆ ನೆರವೇರಿಸುವರು, ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸುವರು.

ಮಾಜಿ ಸಚಿವ ನರಸಿಂಹ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಉಪಸ್ಥಿತಿ, ಮುಖಂಡರುಗಳಾದ ರವಿ ಪಾಟೀಲ ಹಾಗೂ ವಿಠಲ್ ಯಾದವ್ ಧ್ವಜಾರೋಹಣ ನೆರವೇರಿಸುವರು, ಹೈಕೋರ್ಟ್‌ ನ್ಯಾಯವಾದಿ ಅನಂತ ನಾಯಕ ಹಾಗೂ ಮಾನವ ಬಂಧುತ್ವ ವೇದಿಕೆಯ ಬೆಳಗಾವಿ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಉಪನ್ಯಾಸ ನೀಡುವರು, ಪ್ರಮುಖರಾದ ಶಂಕರ ನಾಯಕ, ರಾಜಾ ಕುಮಾರ ನಾಯಕ, ಡಾ.ಭೀಮಣ್ಣ ಮೇಟಿ, ಡಾ.ಬಿ.ಎಂ.ಅಳ್ಳಿಕೋಟಿ, ಚಂದ್ರಶೇಖರ ದಂಡಿನ, ಹಣಮೇಗೌಡ ಮರ್ಕಲ್, ದುರ್ಗಪ್ಪ ಗೋಗಿಕರ, ಶರಣಪ್ಪ ಗುಳಬಾಳ, ಸೋಮನಾಥ ಡೊಣ್ಣಿಗೇರಿ, ಅಕ್ಷಯ ವೀರಮುಖ ಚಿಕ್ಕೋಡಿ, ವಿಜಯ ತಳವಾರ, ಭೀಮಣ್ಣ ಬೇವಿನಾಳ, ನದೀಮುಲ್ಲಾ ಹುಸೇನ ಇನಾಮದಾರ, ಯಲ್ಲಪ್ಪ ನಾಯಕ ಮಲ್ಲಿಬಾವಿ, ದಾವೂದ್ ಕುಂಬಾರಪೇಟ, ಶರಣು ಕಲಬುರಗಿ, ಕನಕಪ್ಪ ಶೇತಸಿಂಧಿ, ಹಣಮಂತ ಸಿಂಗೆ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.

ವೇದಿಕೆಯ ಅಧ್ಯಕ್ಷ ಸಾಹೇಬಗೌಡ ವಾಗಣಗೇರಾ, ಚಾಂದಪಾಷಾ ಮುಜೇವಾರ ಕುಂಬಾರಪೇಟ, ಮಲ್ಲಪ್ಪ ದೊಡ್ಡಮನಿ, ಶರಣು ಕೋಗಿಲೆ, ಶೇಖ್‌ ಅಮ್ಜದ್ ಇತರರು ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವ ನಗರದ ಹೊರ ವಲಯದಲ್ಲಿನ ಎನ್.ಯು ಕಲ್ಯಾಣ ಮಂಟಪ ಸ್ಥಳಕ್ಕೆ ಮುಖಂಡ ರವಿ ಪಾಟೀಲ್ ಭೇಟಿ ನೀಡಿ, ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News