×
Ad

ಯಾದಗಿರಿ | ವೈದ್ಯಕೀಯ ಪರೀಕ್ಷೆಲ್ಲಿ ಪ್ರಥಮ ರ‍್ಯಾಂಕ್ ಪಡೆದ ಆಕಾಶ್ ಪಾಟೀಲ್

Update: 2025-05-03 19:36 IST

ಯಾದಗಿರಿ: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಗುಲ್ಬರ್ಗಾ ವೈದ್ಯಕೀಯ ಮಹಾವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಆಕಾಶ್ ಆರ್.ಪಾಟೀಲ್ ಸಿಂಗನಳ್ಳಿ ಅವರು 16 ಚಿನ್ನದ ಪದಕ ಪಡೆದು ಗಿರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇಲ್ಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರುದ್ರಗೌಡ ಎಮ್.ಮಾಲಿ ಪಾಟೀಲ್ ಅವರ ಪುತ್ರನಾಗಿರುವ ಆಕಾಶ್ ಪಾಟೀಲ್ ಕಲಬುರಗಿ ಜಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಅಭ್ಯಾಸ ಮುಗಿಸಿದ್ದಾರೆ. ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕುಟುಂಬ ವರ್ಗದವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News