×
Ad

ಯಾದಗಿರಿ | ಬೀಜ ಖರೀದಿಸುವಾಗ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅರಿವು

Update: 2025-05-15 19:09 IST

ಯಾದಗಿರಿ : ತೆಲಂಗಾಣ ಗಡಿ ಭಾಗದ ಗ್ರಾಮಗಳಲ್ಲಿ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳ ಆಯ್ಕೆ ಮತ್ತು ಬೀಜ ಖರೀದಿಸುವಾಗ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ರಾಜಕುಮಾರ ಅವರು ಹೇಳಿದರು.

ಯಾದಗಿರಿ ಜಿಲ್ಲೆಯ ಕೊಂಕಲ್ ಹೋಬಳಿಯ ತೆಲಂಗಾಣ ಗಡಿಭಾಗದ ಗ್ರಾಮಗಳಾದ ಕುಂಟಿಮರಿ ಮತ್ತು ಗೂರನೂರು ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳ ಆಯ್ಕೆ ಮತ್ತು ಹತ್ತಿ ಬೀಜಗಳನ್ನು ಖರೀದಿಸುವಾಗ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಹತ್ತಿ ಬೀಜಗಳನ್ನು ಬಿತ್ತನೆಗೆ ಬಳಸಿ ಅಧಿಕೃತ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಿ ಮತ್ತು ಕಡ್ಡಾಯವಾಗಿ ರಶೀದಿಯನ್ನು ಪಡೆಯಿರಿ. ಅನಧಿಕೃತ ವ್ಯಕ್ತಿಗಳು ಬೀಜ ಮಾರಾಟ ಮಾಡಿದರೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಮತ್ತು ಭತ್ತ ಕಟಾವು ನಂತರ ಭತ್ತದ ಹುಲ್ಲನ್ನು ಸುಡಬೇಡಿ ಮಣ್ಣಿನ ಫಲವತ್ತೆಯನ್ನು ಕಾಪಾಡಿ ಎಂದು ರೈತರಿಗೆ ತಿಳಿಸಿದರು.

ಕೋಂಕಲ್ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳಾದ ಮಹಿಪಾಲರೆಡ್ಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಗೂರುನೂರು ಗ್ರಾಮದ ರೈತರಾದ ರಾಜು ರೆಡ್ಡಿ, ಹನಮರೆಡ್ಡಿ, ಶ್ರೀಧರ್, ಆನಂದ, ರಾಘವರೆಡ್ಡಿ ಮತ್ತು ಕುಂಟಿಮರಿ ಗ್ರಾಮದ ರೈತರಾದ ಭಗವಂತ, ಬಸವರಾಜ ಮತ್ತು ಬಾಲರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News