ಯಾದಗಿರಿ | ಸೈದಾಪುರ ಗ್ರಾಮ ಪಂಚಾಯತ್‌ನಲ್ಲಿ ಬುದ್ಧ ಜಯಂತಿ ಆಚರಣೆ
Update: 2025-05-12 19:05 IST
ಸೈದಾಪುರ : ಅಹಿಂಸೆಯ ಪ್ರತಿಪಾದಕನಾಗಿದ್ದ ಬುದ್ಧನ ತತ್ವಗಳು ಸರ್ವಕಾಲಿಕವಾದವು. ಅವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುದುಕಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಭಗವಾನ್ ಗೌತಮ ಬುದ್ಧ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅರ್ಜುನ ಚವ್ಹಾಣ, ಪರ್ವತರೆಡ್ಡಿಗೌಡ ಕ್ಯಾತ್ನಾಳ, ರಾಜು ದೊರೆ, ಇಸ್ಮಾಯಿಲ್, ಶಿವುಕುಮಾರ, ತಿಪ್ಪಣ್ಣ ಕ್ಯಾಯ್ನಾಳ, ಭೀಮರಾಯ, ಬಸಲಿಂಗಪ್ಪ ಸೇರಿದಂತೆ ಇತರರಿದ್ದರು.