×
Ad

ಯಾದಗಿರಿ | ನಗರದ ವಿವಿಧಡೆ ಶುದ್ಧ ನೀರಿನ ಘಟಕಗಳು ಸ್ಥಾಪನೆ : ಶಾಸಕ ಚೆನ್ನಾರಡ್ಡಿ ಪಾಟೀಲ್

Update: 2025-05-05 16:57 IST

ಯಾದಗಿರಿ : ಜನತೆಗೆ ಶುದ್ಧ ನೀರು ಕೊಡುವ ನಿಟ್ಟಿನಲ್ಲಿ ನಗರದ ವಿವಿಧಡೆ ಶುದ್ಧ ನೀರಿನ ಘಟಕಗಳನ್ನು‌ ಹಂತ, ಹಂತವಾಗಿ ಕೂಡಿಸಲಾಗುತ್ತಿದೆ ಎಂದು ಶಾಸಕ‌ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ಮಾಣೀಕೇಶ್ವರಿ ಹಾಗೂ ಅಜೀಜ್ ಕಾಲೋನಿಯಲ್ಲಿ (ಹನುಮಾನ್ ದೇವಸ್ಥಾನ ಹತ್ತಿರ) ಕೆಕೆಆರ್‌ಡಿಬಿಯ 2023-24ನೇ ಸಾಲಿನಲ್ಲಿ ಯೋಜನೆಯಡಿ ಅಂದಾಜು ಮೊತ್ತ (ತಲಾ ಒಂದಕ್ಕೆ) 13.95 ಲಕ್ಷ ರೂ.ಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟಿಸಿ ಮಾತನಾಡಿದರು.

ಬೇಸಿಗೆಯಲ್ಲಿ ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ವಿವಿಧ ಯೋಜನೆಯಡಿ ಎಲ್ಲಡೆ ಆರ್ ಒ ಪ್ಲಾಂಟ್ ಗಳನ್ನು ಕೂಡಿಸಿಲು ಉದ್ದೇಶಿಸಿದೆ. ಇವುಗಳ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಶುದ್ಧ ನೀರು ಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ್, ಉಪಾಧ್ಯಕ್ಷರಾದ ರುಕಿಯಾ ಬೇಗಂ, ವಾರ್ಡ್ ನ ಸದಸ್ಯರಾದ ಸ್ವಾಮೀದೇದ ದಾಸನ, ಗಣೇಶ ದುಪ್ಪಲ್ಲಿ, ಕೆ.ಕೆ.ಆರ್.ಡಿ.ಬಿ ಸಹಾಯಕ ಕಾರ್ಯಪಾಲಕ ಆಭಿಯಂತರಾದ ಶಿವರಾಜ ಹುಡೆದ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News