×
Ad

ಯಾದಗಿರಿ | ಕಾಂಗ್ರೆಸ್‌ನಿಂದ ಮಾದಿಗ ಸಮುದಾಯವನ್ನು ಕುಂಠಿತಗೊಳಿಸುವ ಷಡ್ಯಂತ್ರ : ಬಿ.ಆರ್.ಬಾಸ್ಕರ್ ಪ್ರಸಾದ್ ಆರೋಪ

Update: 2025-05-06 18:44 IST

ಯಾದಗಿರಿ : ನಮ್ಮ ಸಮುದಾಯದಿಂದ ಸತತವಾಗಿ 40 ವರ್ಷಗಳ ಹೋರಾಟದ ಸಲುವಾಗಿ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಇದೀಗ ರಾಜ್ಯದಲ್ಲಿ ಜಾತಿ ಜನಗಣತಿಗೆ ಅದೇಶಿಸಿದೆ. ಆದರೆ, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಬಡ್ತಿ, ಮೀಸಲಾತಿ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಸರಕಾರ ಮುಂದಾಗಿದ್ದು, ಇದು ಮಾದಿಗ ಸಮುದಾಯವನ್ನು ಸರಕಾರ ಕುಂಠಿತಗೊಳಿಸುವ ಷಡ್ಯಂತ್ರ ಎಂದು ಬಿ.ಆರ್.ಬಾಸ್ಕರ್ ಪ್ರಸಾದ್ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಒಳ ಮೀಸಲಾತಿ ಕ್ರಾಂತಿಕಾರಿ ರಥ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಿಗರ ಒಳ ಮೀಸಲಾತಿ ಜಾರಿ ಆಗುವವರೆಗೂ ಹೊಸ ನೇಮಕಾತಿ, ಬ್ಯಾಕ್ ಲಾಗ್ ಮತ್ತು ಬಡ್ತಿ ಮೀಸಲಾತಿ ಜಾರಿ ಮಾಡುವಂತ್ತಿಲ್ಲ. ಒಂದು ವೇಳೆ ಮಾಡಿದಲ್ಲಿ ರಾಜ್ಯದ ಮಾದಿಗ ಸಮುದಾಯದ ವತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

ನಾಳೆ ಸಿಎಂ ಸಿದ್ದರಾಮಯ್ಯ ನವರು ರಾಯಚೂರಿಗೆ ಜಿಲ್ಲೆಗೆ ಆಗಮಿಸಿಲಿದ್ದು,  ನಮ್ಮ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಮುತ್ತಿಗೆ ಹಾಕುತ್ತೇವೆ ಜೊತೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಈ ವೇಳೆ ಎನಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಪೊಲೀಸ್ ಇಲಾಖೆಗೆ ಕಾರಣ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ್ ಶಿರಗೋಳ, ಪರಶುರಾಮ ಖಾಮನಳ್ಳಿ, ಪುಟ್ಟಣ್ಣ ಮೈಸೂರ, ನಾಗರಾಜ ಜೆಸಿ, ಜಗದೇಶ ದಾಸನಕೇರಿ, ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News