×
Ad

Yadgiri | ಜಿಲ್ಲಾ ಕಾರಾಗೃಹದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಆರಂಭ

Update: 2026-05-22 20:10 IST

ಯಾದಗಿರಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾರಾಗೃಹದ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದ “ಮುಲಾಕತ್ ಸೇ ನ್ಯಾಯತಕ್” ಕಾನೂನು ಸಲಹಾ ಕೇಂದ್ರವನ್ನು ಆರಂಭಿಸಲಾಯಿತು.

ಉಚಿತ ಕಾನೂನು ಅರಿವು ಮತ್ತು ನೆರವು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಅವರು, ಈ ಕೇಂದ್ರದ ಮೂಲಕ ಬಂಧಿಗಳ ಸಂಬಂಧಿಕರು, ಬಂಧಿತರನ್ನು ಭೇಟಿಯಾಗಲು ಬರುವ ಹಿತೈಷಿಗಳು, ಬಂಧಿಗಳು ಹಾಗೂ ಆರೋಪಿಗಳಿಗೆ ಉಚಿತ ಕಾನೂನು ಮಾಹಿತಿ ಮತ್ತು ನೆರವು ದೊರೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕಾನೂನು ಅಭಿರಕ್ಷಕಿ ಶ್ರೀಮತಿ ಸುಷ್ಮಾ ಜಾದವ್ ಹಾಗೂ ಯಾದಗಿರಿ ಜಿಲ್ಲಾ ಕಾರಾಗೃಹದ ವಾರ್ಡನ್ ಎಸ್.ಎಸ್. ಪಾಟೀಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News