×
Ad

ಯಾದಗಿರಿ | ಗ್ರಾಮ ಪಂಚಾಯತ್ ಉಪ ಚುನಾವಣೆ; ಮೇ 25ರಂದು ಮತದಾನ, ಮೇ 2ರಂದು ಮತ ಎಣಿಕೆ : ಡಾ.ಸುಶೀಲಾ ಬಿ.

Update: 2025-05-07 19:37 IST

ಯಾದಗಿರಿ : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲಾ ಬಿ. ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

ಶಹಾಪುರ ತಾಲ್ಲೂಕಿನ 1-ಚಾಮನಾಳ ಗ್ರಾಮ ಪಂಚಾಯತಿಯ 5-ದರ್ಶನಾಪೂರ, ಶೋರಾಪುರ ತಾಲ್ಲೂಕಿನ 04-ಸೂಗುರು ಗ್ರಾಮ ಪಂಚಾಯತಿಯ 5-ಬೇವಿನಾಳ ಎಸ್. ಹೆಚ್ ಮತ್ತು ವಡಗೇರಾ ತಾಲ್ಲೂಕಿನಲ್ಲಿ 9-ನಾಯ್ಕಲ್ ಗ್ರಾಮ ಪಂಚಾಯತಿಯ 2-ನಾಯ್ಕಲ್ ಕ್ಷೇತ್ರಗಳಲ್ಲಿ ಉಪ-ಚುನಾವಣೆ ನಡೆಯಲಿವೆ.

ಚುನಾವಣೆ ವೇಳಾಪಟ್ಟಿ ಪ್ರಕಾರ ನಾಮಪತ್ರ ಸಲ್ಲಿಸಲು 2025ರ ಮೇ 14 ಕೊನೆ ದಿನವಾಗಿದ್ದು, 2025ರ ಮೇ 15 ರಂದು ನಾಮಪತ್ರ ಪರಿಶೀಲಿಸಲಾಗುತ್ತದೆ. ಉಮೇದುವಾರಿಕೆ ಹಿಂಪಡೆಯಲು 2025ರ ಮೇ 17 ಕೊನೆ ದಿನವಾಗಿದೆ.

ಮತದಾನದ ಅವಶ್ಯವಿದ್ದರೆ 2025ರ ಮೇ 25 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಸಲಾಗುವುದು. ಅವಶ್ಯವಿದ್ದರೆ ಮರು ಮತದಾನ 2025ರ ಮೇ 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಸಿ 2025ರ ಮೇ 28 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದು.

ಉಪ ಚುನಾವಣೆ ನಡೆಯುವ ಈ ಗ್ರಾಮ ಪಂಚಾಯತಿಗಳ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು 2025ರ ಮೇ 8 ರಿಂದ 28ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News