×
Ad

ಯಾದಗಿರಿ | ನರೇಗಾದಡಿ ದುಡಿಯೋಣ ಬಾ ಜಾಗೃತಿ ಅಭಿಯಾನ ಕಾರ್ಯಕ್ರಮ

Update: 2025-05-09 20:03 IST

ಸುರಪುರ : ತಾಪಂ ವ್ಯಾಪ್ತಿಯಲ್ಲಿ ಬರುವ ಕರಡಕಲ್ಲ್ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನರೇಗಾದಡಿ ಪ್ರಗತಿಯಲ್ಲಿದ್ದ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಜಾಗೃತಿ ಅಭಿಯಾನ ಮತ್ತು ರೋಜಗಾರ್ ದಿವಸ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಸಜ್ಜನ ಕಾರ್ಯನಿರ್ವಾಹಕ ತಾಪಂ ಸುರಪುರ ರವರು ಅಭಿಯಾನ ಕುರಿತು ಮಾತನಾಡಿ, ಬೇಸಿಗೆಯಲ್ಲಿ ಗ್ರಾಮೀಣ ಕೃಷಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ ನಿರಂತರವಾಗಿ 100ದಿನಗಳ ಅಕುಶಲ ಕೆಲಸ ನೀಡಲಾಗುತ್ತಿದ್ದು, ಕೃಷಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗದೆ, ಗ್ರಾಮ ಪಂಚಾಯತ್‌ ಸ್ಥಳೀಯವಾಗಿ ನೀಡುವ ಕೂಲಿ ಕೆಲಸ ಮಾಡಲು ತಿಳಿಸಿದರು.

ನರೇಗಾದಡಿ ನೋಂದಾಯಿತ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ವರ್ಷದಲ್ಲಿ 100ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ 100ದಿನ ಕೂಲಿ ಕೆಲಸ ಮಾಡಿದರೆ 37000ರೂ. ಗಳಿಸಬಹುದು ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಣ್ಣ, ತಾಂತ್ರಿಕ ಸಯೋಜಕರಾದ ಶಿವಯೋಗಿ ಹಿರೇಮಠ, ತಾಂತ್ರಿಕ ಸಹಾಯಕರು,ಬಿಎಪ್ ಟಿ,ಗ್ರಾಮ ಪಂಚಾಯತಿ GKM,ಕಾಯಕ ಬಂದುಗಳು ಹಾಗೂ ನರೇಗಾ ಕೂಲಿಕಾರ್ಮಿಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News