×
Ad

ಯಾದಗಿರಿ | ಮೌನೇಶ ಪಾಟೀಲ್ ಬೆಳಗೇರಾಗೆ ʼದ ಮದರ್ ಆಫ್ ಸೋಶಿಯಲ್ ವರ್ಕ್ ಜೇನ್ ಆಡಮ್ಸ್ʼ ರಾಜ್ಯ ಪ್ರಶಸ್ತಿ ಪ್ರದಾನ

Update: 2025-05-15 19:06 IST

ಯಾದಗಿರಿ : ಎಚ್ಐವಿಸಿಎಸ್‌ಸಿ ನ ಜಿಲ್ಲಾ ಸಂಯೋಜಕರು ಹಾಗೂ ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್(ರಿ) ಜಿಲ್ಲಾ ಘಟಕದ ಯಾದಗಿರಿಯ ಜಿಲ್ಲಾಧ್ಯಕ್ಷರಾದ ಮೌನೇಶ ಪಾಟೀಲ್ ಬೆಳಗೇರಾ ಅವರ ಸಂಘಟನೆ ಕೌಶಲ್ಯ ಮತ್ತು ವಿವಿಧ ಕ್ಷೇತ್ರದಲ್ಲಿನ ಸೇವೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿದ ʼಮದರ್ ಆಫ್ ಸೋಶಿಯಲ್ ವರ್ಕ್ ಜೇನ್ ಆಡಮ್ಸ್ ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ)ರಾಜ್ಯ ಸಮಿತಿ ವತಿಯಿಂದ ದಾವಣಗೆರೆಯ ರೋಟರಿ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಸಮಾವೇಶ ಕುರಿತು ಪೂರ್ವಬಾವಿ ಸಭೆಯನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಸಂತೋಷಕುಮಾರ ಎಂ ಅವರನ್ನು ನಮ್ಮ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್, ದಾವಣಗೆರೆ ವಿಶ್ವವಿದ್ಯಾನಿಲಯಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಲೋಕೇಶ್ ಎಂ.ಯೂ., ರಾಜೇಂದ್ರಕುಮಾರ್, ಮಹಾಲಿಂಗಪ್ಪ, ಡಾ.ಮಹೇಶ್, ಡಾ.ಪಾಂಡುರಂಗ ಇವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವೃತ್ತಿಪರ ಸಾಮಾಜಿಕ ಕಾರ್ಯಕರ್ತರು, ಯಾದಗಿರಿ ಜಿಲ್ಲಾ ಸಮಿತಿಯ ಸದಸ್ಯರಾದ ಮಹೇಶಕುಮಾರ್ ಎಸ್., ಸೈಯದ್ ಪಾಷ, ಶ್ವೇತಾ ನಾಯಕ, ಬೇಬಿ ರಾಠೋಡ್, ಮಂಜುನಾಥ ಇವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಿದರು ಮತ್ತು ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ಸದಸ್ಯರು ವಿದ್ಯಾರ್ಥಿಗಳು ನೌಕರರು ಪದವಿಧರರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ನಾಗರಾಜ್ ಜಿಒ, ಆರೋಗ್ಯ ಇಲಾಖೆಯ ನೌಕರರು, ವೃತ್ತಿಪರ ಸಮಾಜ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News