×
Ad

ಯಾದಗಿರಿ | ಬಿಹಾರದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡಲು ಆಗ್ರಹಿಸಿ ಪ್ರತಿಭಟನೆ

Update: 2025-05-05 18:10 IST

ಯಾದಗಿರಿ : ಬೌದ್ಧರ ಧಾರ್ಮಿಕ ಪವಿತ್ರ ಕ್ಷೇತ್ರವನ್ನು ಬೌದ್ಧರಿಗೆ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ. 13, 25, ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ. ಟಿ ಆ್ಯಕ್ಟ್ 1949 ಅನ್ನು ರದ್ದು ಪಡಿಸಿ ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತಮಂಡಳಿ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ನಾವು ಇಲ್ಲಿಯವರೆಗೆ ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ, ಇನ್ನುಮುಂದೆ ಕ್ರಾಂತಿಯ ಹೋರಾಟಕ್ಕೆ ಅನುಕೂಲ ಮಾಡಿಕೊಡಬೇಡಿ ಎಂದು ಸುರ್ಯಕಾಂತ ನಿಂಬಳಕರ್ ಹೇಳಿದರು.

ಸೋಮವಾರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಸುಭಾಷ್ ವೃತ್ತದವರೆಗೂ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುದ್ಧಗಯಾ ಜಗತ್ತಿನ ಬೌದ್ಧರಿಗೆಲ್ಲಾ ಪರಮ ಪವಿತ್ರವಾದ ಸ್ಥಳ, ರಾಜಕುಮಾರ ಸಿದ್ದಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ, ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನೀಯವಾಗಿದೆ. ಸಾಮ್ರಾಟ್ ಅಶೋಕ ಸೇರಿ ಈ ದೇಶದ ಅನೇಕ ರಾಜ ಮಹಾರಾಜರು ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ಧಾ ಪೂರ್ವಕವಾಗಿ ಅಪಾರ ಕೊಡುಗೆ ನೀಡಿರುವುದು ಇತಿಹಾಸ. ಅದರಿಂದ ಕೇಂದ್ರ ಸರ್ಕಾರ ಕೂಡಲೇ ಮಹಾಬೌದ್ಧಿ ಮಹಾವಿಹಾರವನ್ನು ಬೌದ್ಧರಿಗೆ ಬಿಟ್ಟುಕೊಡಲು ಆಗ್ರಹಿಸಿದರು.

ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ. 13, 25, ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ ಆಕ್ಟ್ 1949 ಅನ್ನು ರದ್ದು ಪಡಿಸಿ, ಬುದ್ಧಗಯಾ ಮಹಾ ಬೋಧಿ ಮಹಾ ವಿಹಾರದ ಆಡಳಿತ ಮಂಡಳಿ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೆತ್ತೆಪಾಲ್ ಬಂತೆಜಿ, ಕಮಲ ರತ್ನ ಬಂತೆಜಿ, ಅಜಪಾಲ್ ಬಂತೆಜಿ, ಹಣಮಂತ ಯಳಸಂಗಿ, ದೇವಿಂದ್ರ ಹೆಗ್ಡೆ, ಶರಣು ಎಸ್ ನಾಟೇಕಾರ್, ಸುರೇಶ್ ಬೊಮ್ಮನ್, ಚಂದ್ರಕಾಂತ ಛಲವಾದಿ, ನಾಗಣ್ಣ ಕಲ್ಲದೇವನಹಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ಭೀಮರಾಯ ಠಾಣಗುಂದಿ, ಮಲ್ಲಿಕಾರ್ಜುನ ಕ್ರಾಂತಿ, ಮಾಳಪ್ಪ ಕಿರದಹಳ್ಳಿ, ರಾಹುಲ್ ಹುಲಿಮನಿ, ನಿಲ್ಲಮ್ಮ ಬಿ ಮಲ್ಲೆ, ಪರಶುರಾಮ ಕುರಕುಂದಿ, ಭೀಮನಾಯಕ ಕರವೇ, ವಿಜಯ ಶಿರಗೋಳ, ಬಾಬಾ ತಲಾರಿ, ಮರೆಪ್ಪ ಹಳ್ಳಿ, ನೀಲಕಂಠ ಬಡೀಗೇರಿ, ಡಾ. ಭಗವಂತ ಅನವಾರ, ಪರಶುರಾಮ ಒಡೆಯರ್, ಭೀಮರಾಯ ಸಿಂದಗೇರಿ, ಶಿವಪುತ್ರ ಜವಳಿ, ರಾಮಣ್ಣ ಸಾದ್ಯಾಪೂರ, ಹಣಮಂತ ಬೊದನಕರ್, ವೆಂಕಟೇಶ ನಾಯ್ಕಲ್, ಮರೆಪ್ಪ ಬುಕ್ಕಲ್, ರಣಧೀರ ಸನ್ನತಿ, ಮಲ್ಲಿಕಾರ್ಜುನ ಪೂಜಾರಿ, ಬಾಬುರಾವ್ ಬುತಾಳೆ, ಆದ್ಯಪ್ಪ ಹೊಸ್ಮನಿ, ಸುನಿಲ್ ಮಾನಪಡೆ, ಭೀಮರಾಯ ಹೊಸ್ಮನಿ, ಹುಲಗಪ್ಪ ಒಡೆಯರ್, ಕಾಶಿನಾಥ ನಾಟೇಕಾರ್, ನಿಂಗಪ್ಪ ಬೀರನಾಳ, ವೆಂಕಟೇಶ ಹೊಸ್ಮನಿ, ಸದ್ದಮ್ ಹುಸೇನ್, ಆಂಜನೇಯ ಯಾದಗಿರಿ, ಶ್ರೀಕಾಂತ್ ಸುಂಗಲಕರ್, ಸಂಪತ್ ಚಿನ್ನಕಾರ, ಸೇರಿದಂತೆ ಅನೇಕರು ಇದ್ದರು‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News